ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಂದು ಸಂಸ್ಕೃತಿಯ ಶಿಸ್ತು, ಸಜ್ಜನಿಕೆ ಮತ್ತು ಮೌಲ್ಯಗಳ ಕಾಪಾಡಿಕೊಳ್ಳುವ ಅಗತ್ಯ ಉಲ್ಲೇಖಿಸಿ ದೇಗುಲದ ಅಧಿಕಾರಿಗಳು ಶಿಮ್ಲಾದ ಶತಮಾನಗಳಷ್ಟು ಹಳೆಯದಾದ ಜೈನ ದೇವಾಲಯಕ್ಕೆ ತುಂಡುಡುಗೆ ಧರಿಸುವುದನ್ನು ನಿಷೇಧಿಸಲಾಗಿದೆ. ಶ್ರೀ ದಿಗಂಬರ ಜೈನ ಸಭಾವು ನಡೆಸುತ್ತಿರುವ ಈ ದೇವಾಲಯವು ಜೈನ ಸಮುದಾಯಕ್ಕೆ ಸೇರಿದ ಜನರಲ್ಲಿ ಜನಪ್ರಿಯವಾಗಿದೆ. ದೇವಾಲಯದ ಆಡಳಿತ ಮಂಡಳಿ ಇತ್ತೀಚೆಗೆ ದೇವಾಲಯದ ಹೊರಗೆ ಹೊಸ ಡ್ರೆಸ್ ಕೋಡನ್ನು ಉಲ್ಲೇಖಿಸಿ ನೋಟೀಸ್ ಹಾಕಿದೆ.
ಎಲ್ಲಾ ಮಹಿಳೆಯರು ಮತ್ತು ಪುರುಷರು ಯೋಗ್ಯವಾದ ಬಟ್ಟೆಗಳ ಧರಿಸಿ ದೇವಾಲಯಕ್ಕೆ ಬರಬೇಕು, ಗಿಡ್ಡ ಬಟ್ಟೆ, ಹಾಫ್ ಪ್ಯಾಂಟ್, ಬರ್ಮುಡಾ, ಮಿನಿ ಸ್ಕರ್ಟ್, ನೈಟ್ ಸೂಟ್, ಟೋರ್ನ್ ಜೀನ್ಸ್, ಫ್ರಾಕ್ ಮತ್ತು ತ್ರೀ ಕ್ವಾರ್ಟರ್ ಜೀನ್ಸ್ ಇತ್ಯಾದಿಗಳನ್ನು ಧರಿಸಿದವರು ದೇವಾಲಯದ ಆವರಣದ ಹೊರಗೆ ಮಾತ್ರ ಪೂಜೆ ಸಲ್ಲಿಸಬೇಕು ಎಂದು ಜೈನ ಮಂದಿರದ ಹೊರಗೆ ಸೂಚನೆ ಹಾಕಲಾಗಿದೆ.