February 26, 2026
Thursday, February 26, 2026
spot_img

ಅರೆಸ್ಟ್ ಮಾಡೋಕೆ ಬಂದ ದೆಹಲಿ ಪೊಲೀಸರನ್ನು ಬಂಧಿಸಿದ ಶಿಮ್ಲಾ ಪೊಲೀಸರು: ಕಾರಣ ಏನ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶ ಪೊಲೀಸರು ದೆಹಲಿಯಿಂದ ಬಂದಿದ್ದ ಸುಮಾರು 20 ಪೊಲೀಸ್ ಸಿಬ್ಬಂದಿಯನ್ನು ತಡೆದು ಬಂಧಿಸಿದ ಘಟನೆ ಶಿಮ್ಲಾದಲ್ಲಿ ನಡೆದಿದೆ. ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲು ದೆಹಲಿ ಪೊಲೀಸ್ ತಂಡ ಹಿಮಾಚಲಕ್ಕೆ ಬಂದಿದ್ದ ವೇಳೆ ಈ ಬೆಳವಣಿಗೆ ನಡೆದಿದೆ.

ಪ್ರತಿಭಟನೆ ಬಳಿಕ ಮೂವರು ಕಾರ್ಯಕರ್ತರು ರೋಹ್ರು ಪ್ರದೇಶದ ಹೋಟೆಲ್‌ನಲ್ಲಿ ತಂಗಿರುವ ಮಾಹಿತಿ ಪಡೆದ ದೆಹಲಿ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ತೆರಳಿದ್ದರು. ಆದರೆ ಚಂಡೀಗಢ-ಕಲ್ಕಾ-ಶಿಮ್ಲಾ ಹೆದ್ದಾರಿಯಲ್ಲಿ ಧರ್ಮಪುರ ಸಮೀಪ ಸೋಲನ್ ಪೊಲೀಸರು ಬ್ಯಾರಿಕೇಡ್ ಹಾಕಿ ದೆಹಲಿ ತಂಡವನ್ನು ತಡೆದರು. ಅನುಮತಿ ಇಲ್ಲದೆ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಆರೋಪದಡಿ ದೆಹಲಿ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ, ಅವರ ವಾಹನಗಳನ್ನು ವಶಪಡಿಸಿಕೊಂಡರು.

ಇದನ್ನೂ ಓದಿ:

ಬಂಧಿತ ಮೂವರು ಕಾರ್ಯಕರ್ತರನ್ನು ಶಿಮ್ಲಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ಪ್ರಕರಣ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !