ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಶಿವಮೊಗ್ಗ-ಬೆಂಗಳೂರು ವಿಮಾನ ಹಾರಾಟ ಆರಂಭವಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದ್ದಾರೆ.
ಶಿವಮೊಗ್ಗ ಏರ್‌ಪೋರ್ಟ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ರೈತರು. ಕೃಷಿ ಜಮೀನುಗಳ ಸ್ವಾಧೀನ ಹಾಗೇ ಯಾವುದೇ ಸಮಸ್ಯೆಯಾಗದಂತೆ ಅವರು ಸಹಕರಿಸಿದ ರೀತಿಗೆ ಗೌರವ ಸಲ್ಲಿಸಬೇಕು.
ಬೆಂಗಳೂರು ನಂತರ ಅತಿದೊಡ್ಡ ವಿಮಾನ ನಿಲ್ದಾಣ ಶಿವಮೊಗ್ಗದಲ್ಲಿದೆ. ಸಹಕರಿಸಿದ ಎಲ್ಲ ರೈತರಿಗೂ ಧನ್ಯವಾದಗಳು ಎಂದಿದ್ದಾರೆ. ಕೆಂಪೇಗೌಡ ಏರ್‌ಪೋರ್ಟ್‌ನಿಂದ ವಿಮಾನ ಶಿವಮೊಗ್ಗಕ್ಕೆ ಹೊರಟಿದ್ದು, ಬಿಎಸ್‌ವೈ ಕೆಲ ರೈತರ ಜತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.