ಶಿವಮೊಗ್ಗ ಕಲ್ಲು ತೂರಾಟ: ಸಿಎಂ, ಗೃಹ ಸಚಿವರ ಪ್ರತಿಕ್ರಿಯೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್‌ ಕೊನೆಗೂ ಮೌನ ಮುರಿದಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿದ್ದಾರೆಂದು ಹರಿಹಾಯದರು.

ಈದ್‌ ಮಿಲಾದ್‌ ಮೆರವಣಿಗೆ ವೇಳೆ ನಡೆದಿರುವ ಘಟನೆ ಕ್ಷಮಿಸುವಂಥದ್ದಲ್ಲ, ದೇವರು-ಧರ್ಮ ವಿಚಾರದಲ್ಲಿ ಯಾರೇ ಅಶಾಂತಿ ಉಂಟುಮಾಡಲು ಬಯಸಿದರೂ ನಮ್ಮ ಸರಕಾರ ಅಂಥವರನ್ನು ಬಗ್ಗು ಬಡಿಯುತ್ತದೆ ಎಂದರು. ಈಗಾಗಲೇ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದಲ್ಲಿ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದರು.

ಶಿವಮೊಗ್ಗ ಘಟನೆಗೆ ಹೊರಗಿನವರು ಕಾರಣರಲ್ಲ-ಪರಮೇಶ್ವರ್

ಇನ್ನೂ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್‌ ಮಾತನಾಡಿ, ಇದೆಲ್ಲಾ ಹೊರಗಿನಿಂದ ಬಂದವರ ಕೃತ್ಯವಲ್ಲ, ನಗರದಲ್ಲಿ ಏನಾಗಿದೆ ಎಂಬುದು ನಮಗೂ ಗೊತ್ತು. ಹೊರಗಿನಿಂದ ಬರಲು ಯಾರಿಗೂ ಅವಕಾಶ ನೀಡಿಲ್ಲ. ಒಟ್ಟಿನಲ್ಲಿ ಬೃಹತ್‌ ಮಟ್ಟದಲ್ಲಿ ನಡೆಯಬೇಕಿದ್ದ ಗಲಾಟೆಯನ್ನು ನಮ್ಮ ಪೊಲೀಸರು ಹತೋಟಿಗೆ ತಂದಿದ್ದಾರೆ. ರಾಜ್ಯದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!