ಹೊಸದಿಗಂತ ವರದಿ ಹಾಸನ :
ಸಕಲೇಶಪುರ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದ ಶಿರಾಡಿಘಾಟ್ ರಸ್ತೆಯಲ್ಲಿ ವಾಹನಗಳು ಆತಂಕದಿಂದ ನಿಧಾನಗತಿಯಲ್ಲಿ ಸಂಚರಿಸುತ್ತಿವೆ.
ರಾಷ್ಟ್ರೀಯ ಹೆದ್ದಾರಿ 75 ಹಾಸನ ಮಾರ್ಗವಾಗಿ ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಸಂಪೂರ್ಣ ಗುಂಡಿಯಾದರೆ ಮತ್ತೊಂದೆಡೆ ಚತುಷ್ಪಥ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಟಾಚಿ, ಡೋಜರ್ ಮೂಲಕ ಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಯುತ್ತಿದೆ.
ಶಿರಾಡಿಘಾಟ್ ರಸ್ತೆಯ ದೊಡ್ಡತಪ್ಪಲು ಬಳಿ ಗುಂಡಿಗೆ ಬಾರಿ ಪ್ರಮಾಣದ ನೀರು ತುಂಬಿಕೊಳ್ಳುತ್ತಿರುವುದರಿಂದ ದೊಡ್ಡತಪ್ಪಲು ಬಳಿ ಆತಂಕದಲ್ಲೇ ವಾಹನ ಸವಾರರ ಓಡಾಟ ನಡೆಸುತ್ತಿದ್ದಾರೆ. ಒಂದು ಭಾಗದ ರಸ್ತೆಯಲ್ಲಿ ದ್ವಿಮುಖವಾಗಿ ಸಂಚರಿಸುತ್ತಿರುವ ನೂರಾರು ವಾಹನಗಳಾದರೆ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಗುಂಡಿ ಮುಚ್ಚಲು ಡೋಜರ್, ಇಟಾಚಿ ಚಾಲಕರು ಹರಸಾಹಸ ಪಡುತ್ತಿದ್ದಾರೆ