ಶಿರೂರು ಗುಡ್ಡ ಕುಸಿತ: ಏಳನೇ ದಿನವೂ ಸಿಗದ ಕೇರಳದ ಲಾರಿ ಚಾಲಕನ ಸುಳಿವು

ಹೊಸ ದಿಗಂತ ವರದಿ, ಅಂಕೋಲಾ:

ತಾಲೂಕಿನ ಶಿರೂರಿನಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಸಿಲುಕಿರುವ ಕೇರಳದ ಲಾರಿ ಚಾಲಕ ಅರ್ಜುನ್,ಕುಮಟಾದ ಜಗನ್ನಾಥ ಅವರ ಕುರುಹು ಏಳನೆಯ ದಿನವೂ ಪತ್ತೆಯಾಗಿಲ್ಲ.

ಮಳೆಯ ನಡುವೆ ಶೋಧ ಕಾರ್ಯವನ್ನು ಭಾರತೀಯ ಮಿಲಿಟರಿ ಭರದಿಂದ ಸಾಗಿದೆ.

ಸೇನಾಪಡೆಯಿಂದ GPR (Ground penetrating radar) ಮೂಲಕ ಹುಡುಕುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ನೆಲದಾಳಕ್ಕೆ ನುಗ್ಗಿ ಪತ್ತೆಹಚ್ಚುವ ರಾಡಾರ್ ಇದಾಗಿದ್ದು ಈ ಕಾರ್ಯಾಚರಣೆಯ ಫಲಿತಾಂಶದತ್ತ ಕುತೂಹಲ ನೆಟ್ಟಿದೆ.
ಈ ಮಧ್ಯೆ ಅರ್ಜುನ್ ಪತ್ತೆ ಕಾರ್ಯ ವಿಳಂಬ ಖಂಡಿಸಿ ಲಾರಿ ಚಾಲಕರಿಂದ ಪ್ರತಿಭಟನೆಯೂ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!