ದಿಗಂತ ವರದಿ ಅಂಕೋಲಾ :
ಶಿರೂರುಗುಡ್ಡ ಕುಸಿತದ ಹಿನ್ನೆಳೆಯಲ್ಲಿ ಕೇರಳದ ಅರ್ಜುನ , ಕುಮಟಾದ ಜಗನ್ನಾಥ, ಶೋಧಕ್ಕೆ ಭೂಸೇನೆ ಮತ್ತು ಎನ್.ಡಿ. ಆರ್.ಎಫ್ ತಂಡ ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭ ಮಾಡಿವೆ.
ಗಂಗಾವಳಿ ನದಿಯಲ್ಲಿ ಬೋಟ್ ಮೂಲಕ, ಮುಗುಳುತಜ್ಞರ ಸಹಾಯದಿಂದ ಶೋಧ ಕಾರ್ಯ ಸಾಗಿದೆ. ನದಿಯಲ್ಲಿ ಭಾರಿ ಪ್ರಮಾಣದ ಮಣ್ಣಿದ್ದು ಕಾರ್ಯಾಚರಣೆಗೆ ಅಡಚಣೆ ಎದುರಾಗುತ್ತಿದೆ. ಇದೀಗ ನೌಕಾಪಡೆಯ ಅಧಿಕಾರಿಗಳಿಂದಲೂ ಪರಿಶೀಲನೆ ನಡೆಯುತ್ತಿದೆ.
ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ಮಣ್ಣು ತುಂಬಿದೆ, ಇದನ್ನು ತೆರವು ಮಾಡಿದರೆ ಅಲ್ಲಿ ಸಾಕಷ್ಟು ವಾಹನಗಳು ಸಿಗುವ ಸಾಧ್ಯತೆ ಇದೆ. ಈ ಶೋಧ ಕಾರ್ಯಕ್ಕೆ ಬೆಳಗಾವಿಯ ಗೋಕಾಕ್ ದಿಂದ ಭಾರೀ ಸಾಮರ್ಥ್ಯದ ಪೊಕ್ಲೆನ್ ಯಂತ್ರ ಅಂಕೋಲಾಕ್ಕೆ ಆಗಮಿಸಿದ್ದು ನದಿಯಲ್ಲಿ ಶೋಧ ಕಾರ್ಯ ತೀವ್ರಗೊಳ್ಳಲಿದೆ.
ಈ ಯಂತ್ರ ನದಿಯಲ್ಲಿ ಸಾಕಷ್ಟು ದೂರದ ವರೆಗೆ ಮಣ್ಣು ತೆರುವುಗೊಳಿಸುವ ಕಾರ್ಯ ಮಾಡಲಿದ್ದು ರಾಷ್ಟ್ರೀಯ ಹೆದ್ದಾರಿ 63 ರಿಂದ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಸುಗಮವಾಗಿ ಪ್ರವೇಶಕ್ಕೆ ಪೊಲೀಸ್ ಇಲಾಖೆ ವತಿಯಿಂದ ಅನುವು ಮಾಡಿ ಕೊಡಲಾಗಿದೆ. ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಸ್ವತಃ ಮುತುವರ್ಜಿ ವಹಿಸಿ ಭಾರೀ ಸಾಮರ್ಥ್ಯದ ಯಂತ್ರವನ್ನು ತರಿಸಿದ್ದಾರೆ.