ದಿಗಂತ ವರದಿ ಅಂಕೋಲಾ:
ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಸಾವೀಗಿಡಾದ ಮತ್ತೆರಡು ಮೃತ ದೇಹಗಳು ಗುರುವಾರ ಬೆಳಿಗ್ಗೆ ಪತ್ತೆಯಾಗಿದ್ದು ಒಟ್ಟು ಆರು ಮೃತ ದೇಹಗಳು ಪತ್ತೆಯಾದಂತಾಗಿದೆ.
ಗೋಕರ್ಣ ಸಮೀಪದ ಗಂಗೆಕೊಳ್ಳ ಕಡಲ ತೀರದಲ್ಲಿ ಆವಂತಿಕಾ (9) ಮೃತ ದೇಹ ದೊರಕಿದ್ದು ಲಕ್ಷ್ಮಣ ನಾಯ್ಕ ಕುಟುಂಬದ ನಾಲ್ಕು ಜನರ ಮೃತ ದೇಹಗಳು ಪತ್ತೆ ಆದಂತಾಗಿದೆ.
ತಾಲೂಕಿನ ಮಂಜಗುಣಿ ಬಳಿ ಪುರುಷನೋರ್ವನ ಮೃತ ದೇಹ ಪತ್ತೆಯಾಗಿದೆ ಈತ ಲಾರಿ ಚಾಲಕ ಇರಬಹುದು ಎಂದು ಅಂದಾಜಿಸಲಾಗಿದೆ.