ದಿಗಂತ ವರದಿ ಅಂಕೋಲಾ :
ರಾಜ್ಯ ಕಂದಾಯ ಸಚಿವ ಕೃಷ್ಣಭೈರೇಗೌಡಅವರು ಭಾನುವಾರ ಬೆಳಗ್ಗೆ ಶಿರೂರು ಗುಡ್ಡ ಕುಸಿತ ಪ್ರದೇಶ ಮತ್ತು ಬಾಧಿತ ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳಿಂದ ಸ್ಥಿತಿಗತಿಯ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ತಜ್ಞರು ನೀಡಿದ ವರದಿ ಪ್ರಕಾರ ಗುಡ್ಡ ಕುಸಿತದ ಪ್ರದೇಶ ಕೆಸರಿನ ರೂಪದಲ್ಲಿದ್ದು ಯಾವುದೇ ಕ್ಷಣ ಮತ್ತೆ ಕುಸಿಯಬಹುದು. ಗುಡ್ಡದ ಮಣ್ಣು ತುಂಬಿದ ಕೃಷಿ ಮತ್ತುವಾಸ್ತವ್ಯದ ಭೂಮಿ ಸಹ ಕೆಸರಮಯವಾಗಿದೆ. ಮಳೆ ಬೇರೆ ಬರುತ್ತಿದೆ. ಅಪಾಯದ ಮಧ್ಯೆಯೇ ಕಾರ್ಯಾಚರಣೆ ಸಾಗಿದ್ದು, ಸರ್ಕಾರ ಎಲ್ಲ ಬೆಂಬಲ ಸಹಕಾರ ನೀಡಿದೆ ಎಂದರು.
ಘಟನೆಯಲ್ಲಿ ನೊಂದವರಿಗೆ ಶಾಶ್ವತ ಪರಿಹಾರಕ್ಕೆ ಚಿಂತನೆ ನಡೆಯಲಿದೆ ಎಂದರು.
ಶಾಸಕ ಸತೀಶ ಸೈಲ್ ಮತ್ತಿತರರು ಇದ್ದರು.