ಹೊಸದಿಗಂತ ಡಿಜಿಟಲ್ ಡೆಸ್ಕ್:
ಈದ್ ಮಿಲಾದ್ ಮೆರವಣಿಗೆ ವೇಲೆ ನಡೆದ ಕಲ್ಲು ತೂರಾಟ ಘಟನೆ ನಗರದಲ್ಲಿ ಪ್ರಕ್ಷುಬ್ಧ ವಾತಾರವರಣವನ್ನು ನಿರ್ಮಾಣ ಮಾಡಿದೆ. ನಗರದಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ನಿಷೇಧಾಜ್ಞೆ ಜಾರಿಯಲ್ಲಿದೆ. ಈ ನಡುವೆ ಗಲಭೆಕೋರರು ಆಡಿದ ಮಾತು ಸ್ಥಳೀಯ ಹಿಂದು ಮಹಿಳೆಯರಲ್ಲಿ ಭಯವನ್ನು ಸೃಷ್ಟಿಸಿದೆ.
ಪರಿಸ್ಥಿತಿ ಅವಲೋಕಿಸಲು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮನೆ ಮನೆಗೆ ಭೇಟಿ ಕೊಟ್ಟು, ಧೈರ್ಯು ತುಂಬು ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯೊಬ್ಬರು ಗಲಭೆಕೋರರು ಸೃಷ್ಟಿಸಿದ ಅವಾಂತರವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮುಖಕ್ಕೆ ಬಟ್ಟೆ ಕಟ್ಟಿದ್ದ ಪುಂಡರ ಮನೆಗಳ ಮೇಲೆಲ್ಲಾ ಕಲ್ಲು ತೂರಾಟ ನಡೆಸಿ, ಹಾನಿಗೊಳಿಸಿದ್ದಾರೆ. ಇಷ್ಟೇ ಅಲ್ಲದೆ ʻಹಿಂದು ಹೆಣ್ಮಕ್ಕಳನ್ನು ಸುಮ್ಮನೆ ಬಿಡೋದಿಲ್ಲ, ಅವರನ್ನು ಅತ್ಯಾಚಾರ ಮಾಡುವುದಾಗಿʼ ಕೇಕೆ ಹಾಕುತ್ತಾ ಹೇಳಿದರೆಂಬ ಆತಂಕಕಾರಿ ವಿಷಯವನ್ನು ತಿಳಿಸಿದರು.
ನಮ್ಮನ್ನು ಬಂಧಿಸಿದರೂ ನಮಗಿರುವ ಇನ್ಫ್ಲುಯೆನ್ಸ್ ಆಧಾರದ ಮೇಲೆ ಎರಡು ದಿನಗೊಳಳಗೆ ಆಚೆ ಬಂದು ಹೇಳಿದ ಕೆಲಸ ಮಾಡೇ ಮಾಡ್ತೇವೆ ಎಂದು ಕಿರುಚುತ್ತಾ ಹೇಳಿದರೆಂದು ಮಹಿಳೆ ಸಚಿವರಿಗೆ ವಿವರಿಸಿದರು. ಇದಕ್ಕೆ ಉತ್ತರಿಸಿದ ಮಧು ಬಂಗಾರದ ಯಾವುದೇ ಇನ್ಫ್ಲುಯೆನ್ಸ್ಗೆ ನಮ್ಮ ಸರಕಾರ ಜಗ್ಗಲ್ಲ, ಯಾರೂ ಭಯಪಡುವ ಅಗತ್ಯವಿಲ್ಲ. ತಪ್ಪು ಮಾಡಿವರಿಗೆ ಶಿಕ್ಷೆ ಆಗೇ ಆಗುತ್ತದೆ ಎಲ್ಲರೂ ಧೈರ್ಯವಾಗಿರುವಂತೆ ಸೂಚಿಸಿದರು.