ಹೊಸದಿಗಂತ ಶಿವಮೊಗ್ಗ :
ಕೃಷಿ ಹೊಂಡದಲ್ಲಿ ಬಿದ್ದು, ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಯಡವಾಲ
ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಯಡವಾಲ ಗ್ರಾಮದ ನಿವಾಸಿ ಗೌತಮ್ ನಾಯ್ಕ್(22) ಹಾಗೂ ಶಿವಮೊಗ್ಗ ನಗರದ ಕುಂಬಾರಗುಂಡಿ
ನಿವಾಸಿ ಚಿರಂಜೀವಿ (22) ಮೃತಪಟ್ಟವರಾಗಿದ್ದಾರೆ.
ಸ್ನೇಹಿತನ ಮಗು ನೋಡಲು ಯಡವಾಲಕ್ಕೆ ೧೦ ಮಂದಿ ಸ್ನೇಹಿತರು ಹೋಗಿದ್ದರೆನ್ನಲಾಗಿದೆ. ರಾತ್ರಿ ತೋಟಕ್ಕೆ ಹೋದ ಸಂದರ್ಭದಲ್ಲಿ ಕಾಲುಜಾರಿ ಓರ್ವ ಕೃಷಿ ಹೊಂಡಕ್ಕೆ ಬಿದ್ದಿದ್ದು, ಆತನರಕ್ಷಣೆಗೆ ಮುಂದಾಗಿದ್ದ ಇನ್ಮೊಬ್ಬಕೂಡ ಮೃತಪಟ್ಟಿದ್ದಾನೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.