ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನಲ್ಲಿ ಶಿವಣ್ಣನ ಘೋಸ್ಟ್ ಸಿನಿಮಾ ಇನ್ನೇನು ಕೆಲವೇ ದಿನದಲ್ಲಿ ರಿಲೀಸ್ ಆಗಲಿದೆ.
ಸಿನಿಮಾ ಪ್ರಚಾರದಲ್ಲಿ ಶಿವಣ್ಣ ಬ್ಯುಸಿಯಾಗಿದ್ದು, ಈವೆಂಟ್ ಒಂದರಲ್ಲಿ ಶಿವಣ್ಣ ಭಾವುಕರಾಗಿದ್ದಾರೆ. ವಿಂಟೇಜ್ ಲುಕ್‌ನಲ್ಲಿ ಯುವಕನಂತೆ ಶಿವಣ್ಣ ಕಾಣಿಸ್ತಿದ್ದು, ಎಷ್ಟೋ ವರ್ಷ ಹಿಂದೆ ಹೋದಂತೆ ಭಾಸವಾಗುತ್ತಿದೆ ಎಂದು ಅಭಿಮಾನಿಗಳು ಹೇಳಿದ್ದರು.
ಇದೀಗ ಶಿವಣ್ಣ ಈ ಸಂದರ್ಭದಲ್ಲಿ ಅಮ್ಮನನ್ನು ತುಂಬಾ ಮಿಸ್ ಮಾಡ್ಕೋತಿನಿ, ಅಮ್ಮ ಇದ್ದಿದ್ರೆ ತುಂಬಾ ಖುಷಿ ಪಡ್ತಿದ್ರು ಎಂದು ಭಾವುಕರಾಗಿದ್ದಾರೆ. ಹಳೆಯ ಲುಕ್ ವೈರಲ್ ಆಗಿದೆ, ಎಲ್ಲರೂ ಅದನ್ನು ಇಷ್ಟಪಟ್ಟಿದ್ದಾರೆ, ಆದರೆ ಇದನ್ನು ನೋಡೋದಕ್ಕೆ ಅಮ್ಮ ಇರಬೇಕಿತ್ತು ಅಂತ ಶಿವಣ್ಣ ಹೇಳಿದ್ದಾರೆ.