ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇನ್ನೇನು ಕೆಲವೇ ಸಮಯದಲ್ಲಿ ಜನರ ಮುಂದೆ ಇರಲಿದೆ. ಡಿಸಿಎಂ ಡಿಕೆಶಿ ನಮ್ಮ ಜನರ ಕಷ್ಟವನ್ನು ಮರೆತು ತೆಲಂಗಾಣದ ಕೈ ನಾಯಕರಿಗಾಗಿ ತೆಲಂಗಾಣಕ್ಕೆ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಜನ ಈಗ ಬಂದಿರೋ ಗ್ಯಾರೆಂಟಿಗಳನ್ನು ನಂಬೋದಿಲ್ಲ, ಪ್ರಧಾನಿ ಮೋದಿ ಮಾಡಿದ ಕೆಲಸಗಳನ್ನು ನಂಬಿದ್ದಾರೆ. ಜನರ ಕಷ್ಟಕ್ಕೆ ಸ್ಪಂದಿಸಿ, ಕೆಲಸ ಮಾಡಿ ಎಂದು ಜನ ಚುನಾವಣೆಯಲ್ಲಿ ಗೆಲ್ಲಿಸಿದ್ರೆ ಶೋ ಕೊಡೋಕೆ ತೆಲಂಗಾಣಕ್ಕೆ ಹೋಗಿ ಕುಳಿತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.