ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ ವಿಚ್ಛೇದನ ವದಂತಿ: ಕೊನೆಗೂ ಸ್ಪಷ್ಟನೆ ನೀಡಿದ ಸಹೋದರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik),ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ಮದುವೆಯಾಗಿದ್ದಾರೆ.

ಇದರಿಂದ ತಮ್ಮ ಎರಡನೇ ಪತ್ನಿ ಸಾನಿಯಾ ಮಿರ್ಜಾ (Sania Mirza) ಅವರಿಂದ ದೂರವಾಗಿರುವ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.
ಇತ್ತ ಮಾಡುವೆ ಫೋಟೋಗಳು ವೈರಲ್ ಆದ ಬಳಿಕ ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ಅವರಿಗೆ ಡಿವೋರ್ಸ್ (divorce)​ ನೀಡದೆ ಮತ್ತೊಂದು ಮದುವೆಯಾಗಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ವದಂತಿಗಳಿಗೆ ಉತ್ತರ ಕೊಡುವ ಕೆಲಸವನ್ನು ಸಾನಿಯಾ ಅವರ ಸಹೋದರಿ ಅನಮ್ ಮಿರ್ಜಾ (Anam Mirza) ಮಾಡಿದ್ದಾರೆ.

ಸಾನಿಯಾ ಹಾಗೂ ಶೋಯೆಬ್ ಮಲಿಕ್ ನಡುವಿನ ವೈಯಕ್ತಿಕ ಬದುಕು ವರ್ಷಗಳ ಹಿಂದೆಯೇ ಹದಗೆಟ್ಟಿತ್ತು. ಹೀಗಾಗಿ ಇವರಿಬ್ಬರು ಪರಸ್ಪರ ಬೇರೆ ಬೇರೆ ವಾಸಿಸಲು ಶುರು ಮಾಡಿದ್ದರು. ಆಗಲೇ ಈ ಇಬ್ಬರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಈ ಬಗ್ಗೆ ಈ ಇಬ್ಬರೂ ಸಹ ಯಾವುದೇ ಮಾಹಿತಿ ಹೊರಹಾಕಿರಲಿಲ್ಲ. ಆದರೀಗ ಆ ಎಲ್ಲಾ ಸುದ್ದಿಗಳಿಗೆ ಅಂತಿಮ ತೆರೆ ಬಿದ್ದಿದೆ.

ಸೋಷಿಯಲ್ ಮೀಡಿಯಾದಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳ ನಡುವೆ, ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾನಿಯಾ ಯಾವಾಗಲೂ ತಮ್ಮ ಜೀವನವನ್ನು ತುಂಬಾ ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ. ಅವರು ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕರ ಕಣ್ಣಿನಿಂದ ದೂರವಿಟ್ಟಿದ್ದಾರೆ. ಆದರೆ ಇಂದು ಶೋಯೆಬ್ ಮತ್ತು ಅವಳ ವಿಚ್ಛೇದನದ ಬಗ್ಗೆ ಎಲ್ಲರಿಗೂ ಹೇಳಬೇಕು ಎಂದು ಸಾನಿಯಾ ಭಾವಿಸಿದ್ದಾಳೆ. ಅವರಿಬ್ಬರು ವಿಚ್ಛೇದನ ಪಡೆದು ಕೆಲವು ತಿಂಗಳುಗಳೇ ಕಳೆದಿವೆ. ಶೋಯೆಬ್ ಅವರ ಹೊಸ ಜೀವನಕ್ಕೆ ಸಾನಿಯಾ ಕೂಡ ಶುಭ ಹಾರೈಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇವರಿಬ್ಬರೂ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!