ಪಿ.ಎಫ್.ಐ ನಿಷೇಧದ ಬಳಿಕ ಶೋಭಾ ಕರಂದ್ಲಾಜೆಗೆ ಜೀವ ಬೆದರಿಕೆ

ಹೊಸದಿಗಂತ ವರದಿ ಉಡುಪಿ:

ದೇಶದಲ್ಲಿ ಪಿ.ಎಫ್.ಐ ನಿಷೇಧದ ಬಳಿಕ ವಿದೇಶಗಳಿಂದ ನಿರಂತರವಾಗಿ ಇಂಟರ್ ನೆಟ್ ಕರೆಗಳ ಮೂಲಕ ತನಗೆ ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು

ಅವರು ಶುಕ್ರವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ತನಗೂ ನಾಲ್ಕು ಸಂಖ್ಯೆಯ ವಿದೇಶಿ ನಂಬರ್ ಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ಪೋಲಿಸ್ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದರು

ವಿದೇಶಿ ಇಂಟರ್ ನೆಟ್ ಕರೆಗಳಾಗಿರುವುದರಿಂದ ಪೋಲಿಸರಿಗೆ ಈ ಸಂಖ್ಯೆಗಳು ಯಾರದ್ದೆಂದು ತಿಳಿಯಲು ಕಷ್ಟವಾಗಿದೆ. ಆದರೆ ಈ ಬೆದರಿಕೆ ಕರೆಗಳಿಗೆ ನಾವು ಹೆದರುವುದು ಇಲ್ಲ, ಜಗ್ಗುವುದು ಇಲ್ಲ ಎಂದರು

ಹಿಂದುತ್ವದ ವಿಚಾರವಾಗಿ ಮಾತನಾಡಿದಾಗಲೆಲ್ಲಾ ನನಗೆ ಬೆದರಿಕೆ ಕರೆಗಳು ಬಂದಿದೆ. ಆದರೆ ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುವವರಿಗೆ ತಕ್ಕ ಶಿಕ್ಷೆ ಆಗಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ ಎಂದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!