ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹಿನ್ನಲೆ ರದ್ದಾಗಿದ್ದ IPL ಮೇ 17ರಿಂದ ಪುನರಾರಂಭಾಗಲಿದೆ. ಮೊದಲ ಪಂದ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಆದರೆ ಈ ನಡುವೆ RCB ಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ದೆವುದತ್ ಪಡಿಕ್ಕಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮುಂದಿನ ಪಂದ್ಯಗಳಿಗೆ ವೇಗೆ ಹೆಜಲ್ವುಡ್ ಡೌಟ್ ಎನ್ನಲಾಗಿತ್ತು. ಆದರೆ ಈಗ ತಂಡದ ನಾಯಕ ರಜತ್ ಪಾಟಿದಾರ್ ಕೈ ಗಾಯದಿಂದಾಗಿ ಮುಂದಿನ ಪಂದ್ಯಕ್ಕೆ ಅವರು ಬರೋದು ಡೌಟ್ ಎನ್ನಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಪಾಟಿದಾರ್ ತಮ್ಮ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಸದ್ಯ ಅವರು ಚೇತರಿಸಿಕೊಳ್ಳಲು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಮಾತ್ರವಲ್ಲ ಅವರು ಮುಂಬರುವ ಇಂಗ್ಲೆಂಡ್ ಎ ವಿರುದ್ಧ ಭಾರತ ಎ ತಂಡದ ಪರ ಆಡುವ ಸಾಧ್ಯತೆ ಕೂಡ ಕಡಿಮೆ ಇದೆ ಎನ್ನಲಾಗಿದೆ.