Wednesday, December 24, 2025

ಅಕ್ಷರ್ ಪಟೇಲ್‌ಗೆ ಶಾಕ್: ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ನಾಯಕತ್ವ ಬದಲಾವಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಮಿನಿ ಹರಾಜು ಮುಕ್ತಾಯವಾದರೂ ಫ್ರಾಂಚೈಸಿಗಳ ಒಳಚಟುವಟಿಕೆಗಳು ಇನ್ನೂ ಜೋರಾಗಿವೆ. ಮುಂದಿನ ಸೀಸನ್‌ಗೆ ತಯಾರಿ ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ತೀರ್ಮಾನದತ್ತ ಸಾಗುತ್ತಿರುವ ಸೂಚನೆಗಳು ಲಭಿಸಿವೆ. ಕಳೆದ ಸೀಸನ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಅಕ್ಷರ್ ಪಟೇಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ಹೊರಬಿದ್ದಿದೆ.

ಸೀಸನ್ 18ರ ಮೊದಲು ಅಚ್ಚರಿಯಾಗಿ ಅಕ್ಷರ್‌ಗೆ ನಾಯಕತ್ವ ನೀಡಿದ್ದ ಡೆಲ್ಲಿ, ಆರಂಭದಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ತಂಡ, ಅಂತಿಮ ಹಂತದಲ್ಲಿ ಅಸ್ಥಿರತೆ ಎದುರಿಸಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಅಕ್ಷರ್‌ನ ನಾಯಕತ್ವದಲ್ಲಿ ಅನುಭವದ ಕೊರತೆ ತಂಡಕ್ಕೆ ಹಿನ್ನಡೆ ತಂದಿತು ಎನ್ನಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಮುಂದಿನ ಸೀಸನ್‌ಗೆ ಅನುಭವಿ ನಾಯಕನ ಹುಡುಕಾಟ ಆರಂಭವಾಗಿದೆ.

ಈ ಹಿನ್ನಲೆಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಹೆಸರು ಮುನ್ನೆಲೆಗೆ ಬಂದಿದೆ. ಕಳೆದ ಮೆಗಾ ಹರಾಜಿನಲ್ಲಿ ನಾಯಕತ್ವ ಉದ್ದೇಶದಿಂದಲೇ ರಾಹುಲ್ ಅನ್ನು ಡೆಲ್ಲಿ ಖರೀದಿಸಿತ್ತು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಅವರು ಸಾಮಾನ್ಯ ಆಟಗಾರನಾಗಿ ಆಡಲು ಆಯ್ಕೆ ಮಾಡಿಕೊಂಡಿದ್ದರು. ಭಾರತ ಹಾಗೂ ಐಪಿಎಲ್‌ನಲ್ಲಿ ಹಲವು ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿರುವ ರಾಹುಲ್, 64 ಪಂದ್ಯಗಳಲ್ಲಿ ತಂಡಗಳನ್ನು ನಾಯಕತ್ವ ವಹಿಸಿಕೊಂಡಿದ್ದು ಶೇಕಡಾ 50ರಷ್ಟು ಗೆಲುವಿನ ದಾಖಲೆ ಹೊಂದಿದ್ದಾರೆ.

error: Content is protected !!