August 13, 2026
Thursday, August 13, 2026
spot_img

ಬೆಂಗಳೂರು ಬೈಕ್‌ ಸವಾರರಿಗೆ ಶಾಕ್: ಇನ್ಮುಂದೆ ಫುಟ್‌ಪಾತ್ ಮೇಲೆ ಗಾಡಿ ಹತ್ತಿಸಿದ್ರೆ ಜೇಬಿಗೆ ಬೀಳಲಿದೆ ಭಾರಿ ಕತ್ತರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳ ಒತ್ತುವರಿ ತೆರವು ಕಾರ್ಯಾಚರಣೆಯ ಬೆನ್ನಲ್ಲೇ, ಸಚಿವ ಕೃಷ್ಣಬೈರೇಗೌಡ ಅವರು ಪಾದಚಾರಿಗಳ ಸುರಕ್ಷತೆಗಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಫುಟ್‌ಪಾತ್ ಮೇಲೆ ಬೈಕ್ ಚಾಲನೆ ಮಾಡುವವರಿಗೆ ವಿಧಿಸುವ ದಂಡದ ಮೊತ್ತವನ್ನು 500 ರೂ.ಯಿಂದ ಭಾರಿ ಪ್ರಮಾಣದಲ್ಲಿ ಅಂದರೆ 5,000 ರೂ.ಗೆ ಹೆಚ್ಚಿಸುವಂತೆ ಅವರು ಸಾರಿಗೆ ಸಚಿವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.

ಬೈಕ್ ಸವಾರರ ಅಶಿಸ್ತಿಗೆ ಕಠಿಣ ಬ್ರೇಕ್

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಅನೇಕ ಬೈಕ್ ಸವಾರರು ಪಾದಚಾರಿ ಮಾರ್ಗಗಳ ಮೇಲೆಯೇ ವಾಹನಗಳನ್ನು ಚಲಾಯಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಸ್ತುತ ಚಾಲ್ತಿಯಲ್ಲಿರುವ 500 ರೂ. ದಂಡದ ನಿಯಮವು ಸವಾರರಲ್ಲಿ ಯಾವುದೇ ಭೀತಿ ಮೂಡಿಸುತ್ತಿಲ್ಲ. ಹೀಗಾಗಿ, ದಂಡದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಿಸುವ ಮೂಲಕ ಫುಟ್‌ಪಾತ್ ಮೇಲೆ ಬೈಕ್ ಓಡಿಸುವವರಿಗೆ ಕಠಿಣ ಬಿಸಿ ಮುಟ್ಟಿಸಲು ಕೃಷ್ಣಬೈರೇಗೌಡ ಅವರು ಮುಂದಾಗಿದ್ದಾರೆ.

ಇದನ್ನೂ ಓದಿ:

ಪಾದಚಾರಿಗಳ ಹಕ್ಕು ರಕ್ಷಣೆಗೆ ಆದ್ಯತೆ

ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳು ಕೇವಲ ಪಾದಚಾರಿಗಳ ನಡಿಗೆಗೆ ಮಾತ್ರ ಸೀಮಿತವಾಗಿರಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ವ್ಯಾಪಕ ಒತ್ತುವರಿ ತೆರವು ಕಾರ್ಯಗಳು ಪ್ರಗತಿಯಲ್ಲಿವೆ. ಇದರ ಜತೆಗೆ ಈ ಹೊಸ ಕಠಿಣ ದಂಡದ ನಿಯಮ ಜಾರಿಗೆ ಬಂದರೆ, ಪಾದಚಾರಿ ಮಾರ್ಗಗಳು ಸುರಕ್ಷಿತವಾಗಲಿವೆ ಮತ್ತು ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸೂಕ್ತ ಪಾಠ ಕಲ್ಪಿಸಿದಂತಾಗುತ್ತದೆ ಎಂದು ಸಚಿವರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !