ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಾಯ ತೆರಿಗೆ ಇಲಾಖೆಯಿಂದ (Income Tax Department) ಕಾಂಗ್ರೆಸ್ ಗೆ ಮತ್ತೆ ಎರಡು ನೊಟೀಸ್ ಗಳು ಜಾರಿಯಾಗಿದೆ.
ಈ ಸಂಬಂಧ ಶನಿವಾರ (ಇಂದು) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh), ಶುಕ್ರವಾರ ರಾತ್ರಿ ನಮಗೆ ಮತ್ತೆರಡು ನೊಟೀಸ್ ಕಳುಹಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ʻತೆರಿಗೆ ಭಯೋತ್ಪಾದನೆʼಗೆ ಗುರಿಯಾಗಿದೆ . ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತಿದ್ದಾರೆ ಎಂದು ಆರೋಪಿಸಿದರು. ಈ ನಡುವೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್ ಪಡೆದಿದ್ದಾರೆ ಎಂದು ಹೇಳಿದರು.
ಆದಾಯ ತೆರಿಗೆ ಇಲಾಖೆಯಿಂದ ನಿನ್ನೆ (ಶುಕ್ರವಾರ) ರಾತ್ರಿ ನನಗೆ ನೊಟೀಸ್ ಬಂದಿದೆ. ನಾನು ಆಘಾತಕ್ಕೊಳಗಾಗಿದ್ದೇನೆ, ವಿಷಯ ಈಗಾಗಲೇ ಮುಚ್ಚಿಹೋಗಿದೆ. ಬಿಜೆಪಿ ಕಾಂಗ್ರೆಸ್ ಮತ್ತು I.N.D.I.A ಒಕ್ಕೂಟಕ್ಕೆ ಹೆದರುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಕಳೆದ ಗುರುವಾರ ದೆಹಲಿ ಹೈಕೋರ್ಟ್ ತನ್ನ ವಿರುದ್ಧ ತೆರಿಗೆ ಅಧಿಕಾರಿಗಳು 4 ವರ್ಷಗಳ ಅವಧಿಗೆ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿತ್ತು.