ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಸಿಲುಕಿರುವ ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ ವಿರುದ್ದ ಸಿಬಿಐ ತನಿಖೆಗೆ ಲೋಕಪಾಲ್ ಸೂಚಿಸಿದೆ. ಇದರ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಸಮನ್ಸ್ ನೀಡಿದೆ.
ಮುಹುವಾ ಮೊಯಿತ್ರಾ ಮಾಜಿ ಪಾರ್ಟ್ನರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರರಕರಣ ಸಂಬಂಧ ಮಹುವಾಗೆ ದೆಹಲಿ ಹೈಕೋರ್ಟ್ ಸಮನ್ಸ್ ನೀಡಿದೆ. ಎಪ್ರಿಲ್ 1ರೊಳಗೆ ಉತ್ತರ ನೀಡುವಂತೆ ಕೋರ್ಟ್ ಸೂಚಿಸಿದೆ.
ಮಹುವಾ ಮೊಯಿತ್ರಾ ಸಾರ್ವಜನಿಕವಾಗಿ ಮಾಜಿ ಪಾರ್ಟ್ನರ್ ಹಾಗೂ ವಕೀಲ ಜಯ್ ಅನಂತ್ ದೆಹಾದ್ರಯಿ ವಿರುದ್ಧ ಹಲವು ಗಂಭೀರ ಆರೋಪ ಮಾಡಿದ್ದರು. ಆತ ನಿರುದ್ಯೋಗಿ, ನಂಬಿಕೆ ಅರ್ಹನಲ್ಲ ಸೇರಿದಂತೆ ಹಲವು ಪ್ರತಿಕ್ರಿಯೆಗಳನ್ನು ನೀಡಿದ್ದರು.
ಮಹುವಾ ಮೊಯಿತ್ರಿ ಮಾಧ್ಯಮಕ್ಕೆ ನೀಡಿದ ಕೆಲ ಹೇಳಿಕೆಗಳು ತನ್ನ ಘನತೆಗೆ ಧಕ್ಕೆ ತಂದಿದೆ. ಹೀಗಾಗಿ ಮಹುವಾ ಮೊಯಿತ್ರಾ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಜಯ್ ಅನಂತ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆಕೆ ಹೇಳಿಕೆಯಿಂದ ತನಗೆ ಅಪಾರ ನಷ್ಟವಾಗಿದೆ ಎಂದು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇದೀಗ ಮಹುವಾ ಮೊಯಿತ್ರಾಗೆ ಸಮನ್ಸ್ ನೀಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಿದೆ. ಹೈಕೋರ್ಟ್ ಸಮನ್ಸ್‌ಗೂ ಮೊದಲು ಮಹುವಾ ಮೊಯಿತ್ರಾಗೆ ವಿರುದ್ಧ ಸಿಬಿಐ ತನಿಖೆಗೆ ಸೂಚನೆ ನೀಡಲಾಗಿದೆ.