ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ಭಾರತ ಫೈನಲ್ ಪ್ರವೇಶಿಸಿದೆ. ನಾಳೆ ದುಬೈ ಅಖಾಡದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಇದರ ನಡುವೆ ಭಾರತೀಯ ತಂಡಕ್ಕೆ ಬಿಗ್ ಶಾಕ್ವೊಂದು ಎದುರಾಗಿದೆ. ಕಿಂಗ್ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ.
ಅಭ್ಯಾಸ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಗಾಯಗೊಂಡಿದ್ದು. ಈಗ ಫೈನಲ್ ಆಡುತ್ತಾರೋ ಇಲ್ವೋ ಎಂಬ ಪ್ರಶ್ನೆಯೊಂದು ಮೂಡಿದೆ. ಇದು ಅಭಿಮಾನಿಗಳನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪ್ರಮುಖ ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿ ಮಿಂಚಿದ್ದಾರೆ ಕೊಹ್ಲಿ. ಆದ್ರೆ ಫೈನಲ್ ಪಂದ್ಯ ಮುಂದಿರುವಾಗಲೇ ಅವರು ಗಾಯಗೊಂಡಿದ್ದು ಈಗ ಆತಂಕಕ್ಕೆ ಕಾರಣವಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಪಿಸಿಯೋ ಸ್ಟಾಫ್ 36 ವರ್ಷದ ವಿರಾಟ್ ಕೊಹ್ಲಿಯವರನ್ನು ಪರೀಕ್ಷೆ ಮಾಡಿದೆ. ಅಭ್ಯಾಸ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಮೊಣಕಾಲಿಗೆ ಗಾಯವಾಗಿದ್ದು ಅದಕ್ಕೆ ಸ್ಪ್ರೇ ಹೊಡೆದು ಬ್ಯಾಂಡೇಜ್ ಮಾಡಲಾಗಿದೆ. ಇದಾದ ಬಳಿಕ ಕೊಹ್ಲಿ ಪ್ರ್ಯಾಕ್ಟಿಸ್ನಿಂದ ಆಚೆ ಬಂದು ಉಳಿದ ಆಟಗಾರರು ಪ್ರ್ಯಾಕ್ಟಿಸ್ ಮಾಡುವುದನ್ನು ನೋಡುತ್ತಾ ಕುಳಿತಿದ್ದರು.
ಫೈನಲ್ ಪಂದ್ಯಕ್ಕೂ ಮುನ್ನವೇ ಈ ರೀತಿಯಾಗಿ ಕೊಹ್ಲಿ ಗಾಯಗೊಂಡಿದ್ದಾರೆ. ಇದೇನು ಅಂತಹ ದೊಡ್ಡ ಮಟ್ಟದ ಗಾಯವಲ್ಲ. ನಾಳೆಯಷ್ಟೊತ್ತಿಗೆ ಕೊಹ್ಲಿ ಸರಿಹೋಗುತ್ತಾರೆ. ನ್ಯೂಜಿಲೆಂಡ್ ವಿರುದ್ಧ ಫಿಟ್ ಆಗಿ ಕಣಕ್ಕೆ ಇಳಿಯುತ್ತಾರೆ ಎಂದು ಹೇಳಲಾಗಿದ್ದು, ಭಾರತೀಯ ಟೀಂನಲ್ಲಿ ಹಾಗೂ ಅಭಿಮಾನಿಗಳಲ್ಲಿ ಕೊಂಚ ನಿರಾಳತೆ ಮೂಡಿದೆ.