ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭಾ ಚುನಾವಣೆಗೆ ಅತ್ತ ವಿವಿಧ ಪಕ್ಷಗಳು ತಯಾರಿ ನಡೆಸುತ್ತಿದ್ದು, ಇತ್ತ ಆಡಳಿತ ಪಕ್ಷಕ್ಕೆ ಮತ್ತು ಸಿಎಂ ಕೆ ಚಂದ್ರಶೇಕರ್ ರಾವ್ಗೆ ತೀವ್ರ ಹಿನ್ನಡೆಯಾಗಿದೆ.
ಪಕ್ಷದ 12 ಪ್ರಮುಖ ನಾಯಕರು, ಮಾಜಿ ಸಚಿವರು ಸಹಿತ 35ಕ್ಕೂ ಹೆಚ್ಚು ಪ್ರಮುಖ ನಾಯಕರು ಬಿಆರ್ಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸಮ್ಮುಖದಲ್ಲಿ ಬಿಆರ್ಎಸ್ ನಾಯಕರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಈ ಮೂಲಕ ತೆಲಂಗಾಣದಲ್ಲಿ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೇರಲು ಮತ್ತಷ್ಟು ಬಲ ಸಿಕ್ಕಿದೆ.
ಮಾಜಿ ಸಂಸದ ಪಿ ಶ್ರೀನಿವಾಸ್ ರೆಡ್ಡಿ, ಮಾಜಿ ಸಚಿವ ಜುಪಾಲಿ ಕೃಷ್ಣರಾವ್, ಮಾಜಿ ಶಾಸಕ ಪನ್ಯಂ ವೆಂಕಟೇಶ್ವರಲು, ಮಾಜಿ ಶಾಸಕ ಕೋರಂ ಕನಕಯ್ಯ, ಕೋಟಾ ರಾಮ್ ಬಾಬು, ರಾಕೇಶ್ ರೆಡ್ಡಿ ಸೇರಿದಂತೆ ಹಲವು ಪ್ರಮುಖ ನಾಯಕರು ಕಾಂಗ್ರೆಸ್ ಸೇರಿಕೊಂಡಿದ್ದಾರೆ.