ಪರೀಕ್ಷೆ ಬರೆಯೋಕೆ ಕೂತ ವಿದ್ಯಾರ್ಥಿಗಳಿಗೆ ಶಾಕ್‌, ಓದಿದ್ದೇ ಬೇರೆ, ಬಂದಿದ್ದೇ ಬೇರೆ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾತ್ರಿಯಿಡೀ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿ ಬಂದು ಪರೀಕ್ಷೆ ಬರೆಯಲು ಕೂತು ವಿದ್ಯಾರ್ಥಿಗಳಿಗೆ ಶಾಕ್‌ ಆಗಿದೆ.. ಯಾಕೆ ಗೊತ್ತಾ?

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ  ಪರೀಕ್ಷೆಯಲ್ಲಿ ಎಡವಟ್ಟು ಮಾಡಿದ್ದು, ಮೂರನೇ ಸೆಮ್‌ ವಿದ್ಯಾರ್ಥಿಗಳಿಗೆ ಎರಡನೇ ಸೆಮ್‌ ಪ್ರಶ್ನೆ ಪತ್ರಿಕೆ ನೀಡಲಾಗಿದೆ.

ವಿವಿ ವ್ಯಾಪ್ತಿಯ 145 ಕಾಲೇಜುಗಳಲ್ಲಿ ಪ್ರಶ್ನೆ ಪತ್ರಿಕೆ ಅದಲು ಬದಲು ಆಗಿರುವುದು ಖಚಿತಪಡುತ್ತಿದ್ದಂತೆ, ಇಡೀ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ಬಿ ಎ ಪದವಿಯ ಮೂರನೇ ಸೆಮಿಸ್ಟರ್ ನ ಸಮಾಜಶಾಸ್ತ್ರ ಪರೀಕ್ಷೆ ನಡೆಯಬೇಕಿತ್ತು. ಮೂರನೇ ಸೆಮಿಸ್ಟರ್ ಬದಲಾಗಿ ಎರಡನೇ ಸೆಮಿಸ್ಟರ್ ನ ಪ್ರಶ್ನೆ ಪತ್ರಿಕೆ ನೀಡಲಾಗಿದೆ.

ಪ್ರಶ್ನೆಪತ್ರಿಕೆ ನೋಡಿ ವಿದ್ಯಾರ್ಥಿಗಳು ಆಶ್ಚರ್ಯಪಟ್ಟು ಪ್ರಾಚಾರ್ಯಕರ ಗಮನಕ್ಕೆ ತಂದಿದ್ದಾರೆ. ಆನಂತರ ಪರೀಕ್ಷೆ ರದ್ದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here