ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಸಿನಿಮಾ ZEE5ನಲ್ಲಿ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಭಾರತದಲ್ಲಿ ವೀಕ್ಷಣೆಗೆ ಲಭ್ಯವಿಲ್ಲದಂತಾಗಿದೆ.
ಹೌದು! ಚಿತ್ರದ ಕೆಲವು ದೃಶ್ಯಗಳು ಸೂಕ್ಷ್ಮ ಸ್ವರೂಪದ್ದಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪರಿಶೀಲನೆ ಅಗತ್ಯವೆಂದು ವೇದಿಕೆ ತಿಳಿಸಿದ್ದು, ಮುಂದಿನ ಆದೇಶದವರೆಗೆ ಸಿನಿಮಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ನೈಜ ಘಟನೆಯಾಧಾರಿತ ಸಿನಿಮಾ
ಈ ಚಿತ್ರವು ಪಂಜಾಬ್‌ನ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಬದುಕಿನ ಘಟನೆಗಳನ್ನು ಆಧರಿಸಿದೆ. 1980-90ರ ದಶಕದ ಕೆಲವು ಸೂಕ್ಷ್ಮ ಘಟನೆಗಳನ್ನು ಕಥೆಯಲ್ಲಿ ಒಳಗೊಂಡಿರುವ ಕಾರಣ ಸಿನಿಮಾ ಈಗಾಗಲೇ ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಮೊದಲು ‘ಪಂಜಾಬ್ 95’ ಹೆಸರಿನಲ್ಲಿದ್ದ ಚಿತ್ರ ಬಳಿಕ ‘ಸತ್ಲುಜ್’ ಹೆಸರಿನಲ್ಲಿ ಬಿಡುಗಡೆಯಾಗಿತ್ತು.
ಇದನ್ನೂ ಓದಿ:
ಚಿತ್ರತಂಡಕ್ಕೆ ಬೆಂಬಲ, ಅಭಿಮಾನಿಗಳಿಗೆ ನಿರೀಕ್ಷೆ
ZEE5 ಸಂಸ್ಥೆ ಅಧಿಕೃತ ಹೇಳಿಕೆ ಮೂಲಕ ಸಿನಿಮಾ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ ಎಂದು ಸ್ಪಷ್ಟಪಡಿಸಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ್ತೆ ಪ್ರದರ್ಶನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದೆ. ನಟ ದಿಲ್ಜಿತ್ ದೋಸಾಂಜ್ ಈ ಬೆಳವಣಿಗೆ ಕುರಿತು ನಿರಾಸೆ ವ್ಯಕ್ತಪಡಿಸಿದ್ದು, ಸಿನಿಮಾ ಶೀಘ್ರದಲ್ಲೇ ಮತ್ತೆ ಪ್ರೇಕ್ಷಕರಿಗೆ ಲಭ್ಯವಾಗುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.



