ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮದ ನಡುವೆಯೇ ಗ್ರಾಹಕರಿಗೆ ಗ್ಯಾಸ್ ದರ ಏರಿಕೆಯ ಬಿಸಿ ತಟ್ಟಿದೆ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿವೆ. ಆದರೆ, ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸಾಮಾನ್ಯ ಜನರಿಗೆ ಸಮಾಧಾನದ ಸುದ್ದಿ ನೀಡಲಾಗಿದೆ.
ಇಂದಿನಿಂದ ಜಾರಿಗೆ ಬರುವಂತೆ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಗಳು ಹೀಗಿವೆ:
ದೆಹಲಿ: 1580.50 ರಿಂದ 1691.50 ಕ್ಕೆ ಏರಿಕೆ (111 ಹೆಚ್ಚಳ).
ಕೋಲ್ಕತ್ತಾ: 1795 ಕ್ಕೆ ಏರಿಕೆ.
ಬೆಂಗಳೂರು: ಸುಮಾರು 1700 ರ ಆಸುಪಾಸು.
ಚೆನ್ನೈ: 1849.50.
ಸಾಮಾನ್ಯ ಜನರು ಬಳಸುವ 14 ಕೆಜಿ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಳಿತವಾಗಿಲ್ಲ. ದರಗಳು ಸ್ಥಿರವಾಗಿದ್ದು, ಪ್ರಮುಖ ನಗರಗಳ ಬೆಲೆ ಪಟ್ಟಿ ಇಲ್ಲಿದೆ:
ಬೆಂಗಳೂರು: 855.50
ದೆಹಲಿ: 853
ಮುಂಬೈ: 852.50
ಕಳೆದ ವರ್ಷ ಅಂದರೆ 2025ರಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಗಳಲ್ಲಿ ಸತತ ಇಳಿಕೆ ಕಂಡುಬಂದಿತ್ತು. ಜನವರಿಯಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ದೆಹಲಿ, ಮುಂಬೈ ಸೇರಿದಂತೆ ಮಹಾನಗರಗಳಲ್ಲಿ ಪ್ರತಿ ಸಿಲಿಂಡರ್ ಮೇಲೆ ಸರಾಸರಿ 238 ರಷ್ಟು ಬೆಲೆ ಇಳಿಕೆಯಾಗಿತ್ತು. ಆದರೆ, 2026ರ ಹೊಸ ವರ್ಷದ ಆರಂಭವು ಬೆಲೆ ಏರಿಕೆಯೊಂದಿಗೆ ಶುರುವಾಗಿದೆ.

