ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಮೊತ್ತದ ದೇಣಿಗೆಗಳ ಮೇಲಿನ ಆದಾಯ ತೆರಿಗೆ ವಿನಾಯಿತಿ ಕೋರಿದ್ದ ಕಾಂಗ್ರೆಸ್ ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ತಿರಸ್ಕರಿಸಿದೆ.
2018-19ನೇ ವರ್ಷದಲ್ಲಿ 199.15 ಕೋಟಿ ರೂ. ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ವಜಾಗೊಳಿಸಿದೆ. ಐಟಿ ರಿಟರ್ನ್ಸ್‌ಗಳನ್ನು ತಡವಾಗಿ ಸಲ್ಲಿಸಿದ ಕಾರಣ ಮತ್ತು ನಗದು ದೇಣಿಗೆ ಮಿತಿಗಳ ಉಲ್ಲಂಘನೆಯಿಂದಾಗಿ ವಿನಾಯಿತಿಗಾಗಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ವಜಾಗೊಳಿಸಿದೆ.
02.02.2019 ರಂದು ಸಲ್ಲಿಸಲಾದ ಮೌಲ್ಯಮಾಪಕರ ರಿಟರ್ನ್ ನ್ನು ಆಕ್ಷೇಪಾರ್ಹ ವಿನಾಯಿತಿಗೆ ಅರ್ಹಗೊಳಿಸಲು ‘ಗಡುವು’ ದಿನಾಂಕದೊಳಗೆ ಇಲ್ಲ ಎಂದು ಐಟಿಎಟಿ ಹೇಳಿದೆ.