ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಇಂದಿನಿಂದ ಅನ್ವಯವಾಗುವಂತೆ ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣ ದರವನ್ನು ಹೆಚ್ಚಳ ಮಾಡಿದೆ. ಜುಲೈ ತಿಂಗಳ ನಂತರ ಈ ವರ್ಷದಲ್ಲಿ ಆಗುತ್ತಿರುವ ಎರಡನೇ ಬೆಲೆ ಏರಿಕೆ ಇದಾಗಿದ್ದು, ಜನಸಾಮಾನ್ಯರ ಆರ್ಥಿಕ ಹೊರೆ ಹೆಚ್ಚಾಗಲಿದೆ.
ಉಪನಗರ ರೈಲು ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ 215 ಕಿ.ಮೀ ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ದರ ಹೆಚ್ಚಿಸಲಾಗಿದೆ.
ದೀರ್ಘ ಪ್ರಯಾಣದ ಸಂದರ್ಭದಲ್ಲಿ ಪ್ರತಿ 500 ಕಿಲೋಮೀಟರ್‌ಗೆ ಅಂದಾಜು 10 ರೂಪಾಯಿಗಳಷ್ಟು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.
ಪರಿಷ್ಕೃತ ದರಗಳ ಪಟ್ಟಿ:

ಬಹುತೇಕ ಎಲ್ಲಾ ಪ್ರಮುಖ ರೈಲುಗಳ ಟಿಕೆಟ್ ದರದಲ್ಲಿ ಏರಿಕೆಯಾಗಲಿದೆ. ಅವುಗಳೆಂದರೆ:
ಪ್ರೀಮಿಯಂ ರೈಲುಗಳು: ವಂದೇ ಭಾರತ್, ರಾಜಧಾನಿ, ಶತಾಬ್ದಿ, ತೇಜಸ್, ದುರಂತೋ.
ಇತರ ರೈಲುಗಳು: ಹಮ್ಸಾಫರ್, ಅಮೃತ್ ಭಾರತ್, ಗತಿಮಾನ್, ಗರೀಬ್ ರಥ, ಜನ ಶತಾಬ್ದಿ ಮತ್ತು ನಮೋ ಭಾರತ್ ರಾಪಿಡ್ ರೈಲುಗಳು.
ಗಮನಿಸಿ: ಡಿಸೆಂಬರ್ 26 ಕ್ಕಿಂತ ಮೊದಲು ಬುಕ್ ಮಾಡಿದ ಟಿಕೆಟ್‌ಗಳಿಗೆ ಈ ದರ ಏರಿಕೆ ಅನ್ವಯವಾಗುವುದಿಲ್ಲ.

