SHOCKING | ಬೈಕ್‌ಗೆ ಡಿಕ್ಕಿಯಾಗಿ ಬಾವಿಗೆ ಬಿದ್ದ ವ್ಯಾನ್‌: ಸ್ಥಳದಲ್ಲೇ 12 ಮಂದಿ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೇಗವಾಗಿ ಬಂದ ವ್ಯಾನ್ -ಬೈಕ್‌ಗೆ ಡಿಕ್ಕಿಯಾಗಿ ಬಾವಿಗೆ ಬಿದ್ದ ಪರಿಣಾಮ 12 ಮಂದಿ ಸಾವಿಗೀಡಾದ ಘಟನೆ ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ನಡೆದಿದೆ.

11 Dead As Van Plunges In Well After Hitting Bike In Madhya Pradeshಅಪಘಾತದಲ್ಲಿ ವ್ಯಾನ್‌ನಲ್ಲಿದ್ದ 10 ಮಂದಿ, ಬೈಕ್‌ ಸವಾರ ಹಾಗೂ ರಕ್ಷಣೆಗಾಗಿ ಬಾವಿಗೆ ಇಳಿದ ಸ್ಥಳೀಯರೊಬ್ಬರು ಸೇರಿದಂತೆ 12 ಮಂದಿ ಸಾವಿಗೀಡಾಗಿದ್ದಾರೆ. ವ್ಯಾನ್‌ನಲ್ಲಿ 13 ಜನರು ಪ್ರಯಾಣಿಸುತ್ತಿದ್ದರು. ವೇಗವಾಗಿ ಬಂದ ವ್ಯಾನ್ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಈ ಭೀಕರ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಗುರುತಿನ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಹೆಚ್ಚಿನ  ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!