ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ದಿನದಲ್ಲಿ ಒಂದಲ್ಲ, ಎರಡಲ್ಲ, ನೂರಕ್ಕೂ ಹೆಚ್ಚು ಬಾರ್‌ಗಳಿಗೆ ಭೇಟಿ ನೀಡಿ ವಿಶ್ವದಾಖಲೆ ನಿರ್ಮಿಸಿದ 69 ವರ್ಷದ ವ್ಯಕ್ತಿಯೊಬ್ಬರು ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ಕ್ಲಾರ್ಕ್ಸನ್ (69 ವರ್ಷ) 24 ಗಂಟೆಗಳಲ್ಲಿ 120 ಬಾರ್ ಗಳಿಗೆ ಭೇಟಿ ನೀಡಿ, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅಲ್ಲಿ ದಾಖಲೆ ಬರೆದಿದ್ದಾರೆ.
ಏಪ್ರಿಲ್ 12ರಂದು 24 ಗಂಟೆಯಲ್ಲಿ 120 ಬಾರ್ ಗಳಿಗೆ ಭೇಟಿ ನೀಡಿ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಒಂದೇ ದಿನದಲ್ಲಿ 99 ಪಬ್‌ಗಳಿಗೆ ಭೇಟಿ ನೀಡಿದ ದಾಖಲೆ ಬರೆದಿದ್ದ ಡೇವಿಡ್ ಇದೀಗ ತಮ್ಮದೇ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಈ ದಾಖಲೆಯನ್ನು ಸಿಡ್ನಿಯ ಕ್ಯಾಪ್ಟನ್ ಕುಕ್ ಹೋಟೆಲ್‌ನಿಂದ ಪ್ರಾರಂಭಿಸಿ, ಕೊನೆಯದಾಗಿ ಸಸೆಕ್ಸ್ ಗಾರ್ಡನ್ ಬಾರ್‌ನಲ್ಲಿ ಮುಗಿಸಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ 120 ಬಾರ್ಗಳಲ್ಲಿ ಕುಡಿದು ದಾಖಲೆ ಬರೆದಿದ್ದಾರೆ. ಒಂದು ಪಬ್ನಿಂದ ಇನ್ನೊಂದು ಪಬ್ಗೆ ನಡೆದುಕೊಂಡು ಹೋಗಿಯೇ ದಾಖಲೆ ಬರೆದಿದ್ದಾರೆ. ಗಾರ್ಡನ್ ಬಾರ್‌ನಲ್ಲಿ ಡೇವಿಡ್ ಗೆ ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿ ನೀಡಲಾಗಿದೆ.