ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಕೆಳಗೆ ನಾಡ ಬಾಂಬ್ ಸ್ಫೋಟವಾಗಿರುವಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಗುಂದ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಸಂದೇಶ್ ದೇಸಾಯಿ ಎನ್ನುವ ಪತ್ರಕರ್ತರಿಗೆ ಸೇರಿದ ಕಾರಿನಲ್ಲಿ ಮೂವರು ಪತ್ರಕರ್ತರು, ಶಾಸಕ ಆರ್.ವಿ. ದೇಶಪಾಂಡೆ ಸಭೆಗೆ ತೆರಳುತ್ತಿದ್ದರು. ಜೋಯಿಡಾದ ಗುಂದ ಗ್ರಾಮದ ಬಳಿ ಕಾರಿನ ಟಯರ್‌ಗೆ ಸಿಕ್ಕಿ ಬಾಂಬ್ ಸ್ಫೋಟವಾಗಿದೆ. ಅದೃಷ್ಟವಶಾತ್ ಪತ್ರಕರ್ತರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.