ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ನಗರದ ಕರಾವಳಿ ಜಂಕ್ಷನ್ ಬಳಿಯ ಹೊಟೇಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು , ಹೊಟೇಲ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮಲ್ಪೆ ರಸ್ತೆಯಲ್ಲಿ ಕರಾವಳಿ ಜಂಕ್ಷನ್ ಬಳಿ ಇರುವ ಬಿರಿಯಾನಿ ಹಟ್ ಎಂಬ ಹೊಟೇಲ್ ನಲ್ಲಿ ಸಂಜೆ ವೇಳೆಗೆ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ್ದು. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.