ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದ ಜಂಗಲ್ ಜಾಂಬೋರಿ ರೆಸ್ಟೋರೆಂಟ್‌ನಲ್ಲಿ ಸೋಮವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಘಟನಾ ಸ್ಥಳಕ್ಕೆ 10 ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ರಾಜೌರಿ ಗಾರ್ಡನ್ ಮೆಟ್ರೋ ನಿಲ್ದಾಣದ ಬಳಿ ಬೆಂಕಿ ಅವಘಡ ಸಂಭವಿಸಿರುವುದಾಗಿ ನಮಗೆ ಕರೆ ಬಂದಿದೆ. ಬೆಂಕಿಯನ್ನು ನಿಯಂತ್ರಿಸಲು 10 ಅಗ್ನಿಶಾಮಕ ಟೆಂಡರ್‌ಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗಾರ್ಗ್ ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಘಟನೆಯಿಂದ ಅಕ್ಕಪಕ್ಕದ ಅಂಗಡಿಯವರಲ್ಲಿ ಆತಂಕ ಮನೆಮಾಡಿದೆ. ಘಟನೆ ನಡೆದ ವೇಳೆ ರೆಸ್ಟೋರೆಂಟ್‌ನಲ್ಲಿ ಸುಮಾರು 20 ಮಂದಿ ಇದ್ದರು. ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಹೋಟೆಲ್‌ನಿಂದ ಹೊರಬಂದಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ.