ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರ ಹೊರವಲಯ ಪಣಂಬೂರು ಪರಿಸರದಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆಯಾಗಿದೆ.
ಈ ಬೋಟ್‌ನಲ್ಲಿ 11 ಮಂದಿ ಮೀನುಗಾರರಿದ್ದರು. ಅವರನ್ನು ಇನ್ನೊಂದು ಬೋಟ್‌ನಲ್ಲಿದ್ದವರು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ಈ ಘಟನೆ ಕಡಲತೀರದಿಂದ 90 ಮೀಟರ್ ದೂರದ ಆಳ ಸಮುದ್ರದಲ್ಲಿ ನಡೆದಿದೆ. ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವುದು ಹಾಗೂ ಗಾಳಿಯ ತೀವ್ರತೆಗೆ ಸಿಲುಕಿ ಈ ಬೋಟ್ ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ