SHOCKING | ರಾಜಸ್ಥಾನದಲ್ಲಿ ತರಬೇತಿ ಸಮಯ ಸ್ಫೋಟ: ಇಬ್ಬರು ಸೈನಿಕರು ಹುತಾತ್ಮ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಬಿಕಾನೇರ್’ನ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್’ನಲ್ಲಿ ಇಂದು ತರಬೇತಿ ಅಭ್ಯಾಸದ ಸಮಯ ಟ್ಯಾಂಕ್’ನಲ್ಲಿ ಮದ್ದುಗುಂಡುಗಳನ್ನು ತುಂಬುವಾಗ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ.

ಸ್ಫೋಟದ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.

ಮೂವರು ಸೈನಿಕರು ಟ್ಯಾಂಕ್ನೊಂದಿಗೆ ಅಭ್ಯಾಸ ಮಾಡುತ್ತಿದ್ದರು. ಸ್ಫೋಟದಲ್ಲಿ ಅಶುತೋಷ್ ಮಿಶ್ರಾ ಮತ್ತು ಜಿತೇಂದ್ರ ಹುತಾತ್ಮದ್ದಾರೆ.

ಗಾಯಗೊಂಡ ಸೈನಿಕನನ್ನ ಹೆಲಿಕಾಪ್ಟರ್’ನಲ್ಲಿ ಚಂಡೀಗಢಕ್ಕೆ ಕರೆದೊಯ್ಯಲಾಗಿದೆ ಎಂದು ಸರ್ಕಲ್ ಆಫೀಸರ್ ಲುಂಕರನ್ಸರ್ (ಬಿಕಾನೇರ್) ನರೇಂದ್ರ ಕುಮಾರ್ ಪೂನಿಯಾ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!