ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಸರನ್ ನಲ್ಲಿ ಸರಯೂ ನದಿಯಲ್ಲಿ ದೋಣಿ ಮುಳುಗಿದ ಘಟನೆ ನಡೆದಿದೆ.
ಇದುವರೆಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕೆಲವರು ಈಜಿ ದಡ ಸೇರಿದ್ದಾರೆ. ಮಾಂಝಿ ಪೊಲೀಸ್ ಠಾಣೆ ವ್ಯಾಪ್ತಿಯ ಮಥಿಯಾರ್ ಎಂಬಲ್ಲಿ ಈ ಘಟನೆ ನಡೆದಿದೆ. ನಾಪತ್ತೆಯಾಗಿರುವವರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ನೀರಿನಲ್ಲಿ ಮುಳುಗಿದವರಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ. ದೋಣಿಯಲ್ಲಿದ್ದವರು ಪರ್ವಾಲ್ ಕೃಷಿ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಅಧಿಕಾರಿಗಳು ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲಾ ಜನರು ಸಣ್ಣ ದೋಣಿಯಲ್ಲಿ ಹಿಂತಿರುಗುತ್ತಿದ್ದರು, ನೀರಿನ ಬಲವಾದ ಅಲೆಯು ದೋಣಿಗೆ ಬಡಿದ ನಂತರ ಪಲ್ಟಿಯಾಗಿದೆ.
ಜಿಲ್ಲೆಯ ಡಿಎಂ, ಎಸ್ಪಿ, ಎಸ್‌ಡಿಎಂ ಸೇರಿದಂತೆ ಎಲ್ಲಾ ಆಡಳಿತ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನದಿಯಲ್ಲಿ ಶೋಧ ಕಾರ್ಯಾಚರಣೆಗೆ ಆದೇಶಿಸಿದ್ದಾರೆ.