ಹೊಸದಿಗಂತ, ವರದಿ: ವಿಜಯಪುರ
ಟಯರ್ ಸ್ಫೋಟಗೊಂಡು ಜನತಾ ಟ್ರಾವೆಲ್ಸ್ ಬಸ್ ಏಕಾಏಕಿ ಬೆಂಕಿಹೊತ್ತಿಕೊಂಡು ಭಸ್ಮಗೊಂಡಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿರುವ ಘಟನೆ ನಗರ ಹೊರ ವಲಯ ಹಿಟ್ನಳ್ಳಿ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ಬಸ್ಸಿನ ಟೈಯರ್ ಸ್ಫೋಟಗೊಂಡಿದ್ದು, ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ. ಕ್ಷಣಾರ್ಧದಲ್ಲಿಯೇ ಬೆಂಕಿಹೊತ್ತಿಕೊಂಡು ಧಗಧಗ ಉರಿದಿದ್ದು, ಪ್ರಯಾಣಿಕರ ಲಗೇಜ್ ಸೇರಿ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿ ಆಗಿವೆ.
ಸುದ್ದಿ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.