April 8, 2026
Wednesday, April 8, 2026
spot_img

SHOCKING | ಅರಬೈಲ್ ಘಟ್ಟದಲ್ಲಿ ಅಗ್ನಿಗೆ ಆಹುತಿಯಾದ ಕಾರು: ಚಾಲಕ ಸಜೀವ ದಹನ

ಹೊಸದಿಗಂತ ವರದಿ, ಯಲ್ಲಾಪುರ :

ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರೊಂದಕ್ಕೆ ಬೆಂಕಿ ತಗುಲಿ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾಕ್ಕೆ ತೆರಳುತ್ತಿರುವಾಗ ಈ ಘಟನೆ ಸಂಭವಿಸಿದೆ. ವೋಕ್ಸ್‌ವೇಗನ್ ಕಂಪನಿಗೆ ಸೇರಿದ ಕಾರು ಅಪಘಾತಕ್ಕೀಡಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿಯೇ ಇಡೀ ಕಾರು ಹೊತ್ತೂರಿದಿದೆ .

ಕಾರಿನಲ್ಲಿದ್ದ ಚಾಲಕ ಗುರುತು ಸಿಗದಂತೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೃತಪಟ್ಟ ಕಾರು ಚಾಲಕನ ಗುರುತು ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !