April 12, 2026
Sunday, April 12, 2026
spot_img

ದೆಹಲಿಯಲ್ಲಿ ರಸ್ತೆ ಬದಿ ಕಸ ತೆಗೆಯುವಾಗ ಶಾಕ್‌, ಮಾನವನ ಅಸ್ತಿಪಂಜರ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಸ ತೆಗೆಯುವ ವೇಳೆ ಅಸ್ಥಿಪಂಜರ ಪತ್ತೆಯಾಗಿದ್ದು, ಜನ ಶಾಕ್‌ನಲ್ಲಿದ್ದಾರೆ.

ನಿತ್ಯ ನೈರ್ಮಲ್ಯ ಅಭಿಯಾನ ನಡೆಸುತ್ತಿದ್ದಾಗ ವೃಕ್ಷಿತ್ ಫೌಂಡೇಶನ್ ಸದಸ್ಯರಿಗೆ ಇದು ಸಿಕ್ಕಿತ್ತು, ಕಸ ಕುಡಿಸುವಾಗ ಕಸದ ರಾಶಿಯೊಳಗೆ ಅಸ್ಥಿಪಂಜರ ಪತ್ತೆಯಾಗಿದೆ. ಇದನ್ನು ನೋಡಿ ತಕ್ಷಣ ಸದಸ್ಯರು ಹಿಂದೆ ಸರಿದಿದ್ದಾರೆ.

ಅನುಮಾನಾಸ್ಪದ ಅವಶೇಷಗಳು ಕಂಡುಬಂದ ತಕ್ಷಣ ತಂಡವು ಶುಚಿಗೊಳಿಸುವ ಕಾರ್ಯಾಚರಣೆಯನ್ನು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಅವಶೇಷಗಳ ಮೂಲವನ್ನು ನಿರ್ಧರಿಸಲು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಇದು ಯಾರದ್ದು? ಯಾವ ಸಮಯದ್ದು? ಇಲ್ಲಿಗೆ ಏಕೆ ಬಂತು ಇನ್ನಿತರ ಮಾಹಿತಿ ಕಲೆಹಾಕಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !