October 10, 2026
Saturday, October 10, 2026
spot_img

10 ಕೋಟಿ ವಂಚನೆಯ ಆರೋಪಕ್ಕೆ ಟ್ವಿಸ್ಟ್: ದೂರು ನೀಡಿದವರ ವಿರುದ್ಧವೇ ಪ್ರತಿದೂರು ನೀಡಿದ ಗಾಯಕಿ ಮಂಗ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ತೆಲುಗು ಗಾಯಕಿ ಮಂಗ್ಲಿ ವಿರುದ್ಧ ಕೇಳಿಬಂದ 10 ಕೋಟಿ ರೂಪಾಯಿಗಳ ವಂಚನೆಯ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನ್ನ ವಿರುದ್ಧ ದೂರು ನೀಡಿದ್ದ ವಕೀಲ ಸುಬ್ಬಾರಾವ್ ಎಂಬವವರ ವಿರುದ್ಧವೇ ಮಂಗ್ಲಿ ಪ್ರತಿದೂರು ದಾಖಲಿಸಿದ್ದಾರೆ.

ಮಂಗ್ಲಿ ಹಾಗು ಸಹೋದರ ಶಿವ, ಇತರರ ವಿರುದ್ಧ ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಲಾಭದ ಆಮಿಷವೊಡ್ಡಿ ಜನರಿಂದ ಹಣ ಸಂಗ್ರಹಿಸಿ 10 ಕೋಟಿ ಹಣವನ್ನು ಹೂಡಿಕೆದಾರರಿಂದ ಪಡೆದು, ಅಸಲು ಮತ್ತು ಲಾಭ ಎರಡನ್ನೂ ನೀಡದೆ ವಂಚಿಸುತ್ತಿದ್ದಾರೆ ಎಂದು ಸುಬ್ಬಾರಾವ್ ಅವರು ದೂರು ದಾಖಲಿಸಿದ್ದರು.

ಇದೀಗ ಈ ಆರೋಪಗಳನ್ನು ತಳ್ಳಿಹಾಕಿರುವ ಗಾಯಕಿ ಮಂಗ್ಲಿ, ವಕೀಲ ಸುಬ್ಬಾರಾವ್ ಅವರ ವಿರುದ್ಧವೇ ಹೈದರಾಬಾದ್‌ನ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ತಮ್ಮ ಹೆಸರನ್ನು ಕೆಡಿಸಲು ಸಂಚು ರೂಪಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Must Read