SHOCKING | ಗುಜರಾತ್ ನ ಹುಮ್ಸಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್ ನ ವಲ್ಸಾದ್ ನ ಹುಮ್ಸಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ (Train) ಬೆಂಕಿ ಕಾಣಿಸಿಕೊಂಡಿದೆ.

ಗುಜರಾತ್ ತಿರುಚಿರಾಪಳ್ಳಿ ಮತ್ತು ಶ್ರೀ ಗಂಗಾನಗರ ನಡುವೆ ಚಲಿಸುತ್ತಿದ್ದ ಈ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ರೈಲನ್ನು ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರೈಲಿನಿಂದ ಕೆಳಗೆ ಇಳಿಸಲಾಯಿತು.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಲ್ಸಾದ್ ಮೂಲಕ ಹಾದುಹೋಗುವಾಗ ತಿರುಚಿರಾಪಳ್ಳಿ ಜಂಕ್ಷನ್ನಿಂದ ಶ್ರೀ ಗಂಗಾನಗರ ಜಂಕ್ಷನ್ಗೆ ಹೋಗುವ ರೈಲು ಸಂಖ್ಯೆ 22498 ರ ಪವರ್ ಕಾರ್ / ಬ್ರೇಕ್ ವ್ಯಾನ್ ಬೋಗಿಯಲ್ಲಿ ಬೆಂಕಿ ಮತ್ತು ಹೊಗೆ ಕಂಡುಬಂದಿದೆ. ಪಕ್ಕದ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆಯ ಸಿಪಿಆರ್‌ಒ ಸುಮಿತ್ ಠಾಕೂರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!