ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ನಲ್ಲಿ ಅನಿಲ ಸ್ಫೋಟ ಸಂಭವಿಸಿದ್ದು, ಹಲವಾರು ಕಟ್ಟಡಗಳಿಗೆ ಬೆಂಕಿ ಹೊತ್ತಿಕೊಂಡಿದೆ.
ಈ ಕುರಿತು ಪ್ಯಾರಿಸ್ ನಗರದ ಅಧಿಕಾರಿಯೊಬ್ಬರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಪ್ಯಾರಿಸ್’ನ ಐದನೇ ಭಾಗದಲ್ಲಿ ಬುಧವಾರ ಅನಿಲ ಸ್ಫೋಟ ಸಂಭವಿಸಿದೆ.ಈ ಕಾರಣದಿಂದ ಹಲವಾರು ಕಟ್ಟಡಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದ್ದಾರೆ.
ಸಿಟಿ ಸೆಂಟರ್‌ನ ಲ್ಯಾಟಿನ್ ಕ್ವಾರ್ಟರ್‌ನಲ್ಲಿ ಬೆಂಕಿ ಕಾಣಿಸಿದ್ದು, ಅಗ್ನಿಶಾಮಕ ದಳ ನಿಯಂತ್ರಣಕ್ಕೆ ತರುತ್ತಿದ್ದಾರೆ.
ಪ್ಯಾರಿಸ್‌ನ ಐದನೇ ಅರೋಂಡಿಸ್‌ಮೆಂಟ್‌ನಲ್ಲಿ ಬುಧವಾರ ನಡೆದ ಸ್ಫೋಟದಿಂದ ಕನಿಷ್ಠ 16 ಜನರು ಗಾಯಗೊಂಡಿದ್ದಾರೆ. ಏಳು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸ್ ಇಲಾಖೆ ದೃಢಪಡಿಸಿದೆ.