ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕದಲ್ಲಿ ಎರಡು, ಗುಜರಾತ್‌ನಲ್ಲಿ ಒಂದು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಪ್ರಕರಣಗಳನ್ನು ದೃಢಪಡಿಸಿದ ಬಳಿಕ ಇದೀಗ ಕೊಲ್ಕತ್ತಾದಲ್ಲಿ 5 ವರ್ಷದ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಭಾರತದಲ್ಲಿ ಸೊಂಕಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲೂ ಎಚ್ ಎಂ ಪಿ ವೈರಸ್ ಇದೀಗ ಪತ್ತೆಯಾಗಿದೆ. ಐದು ತಿಂಗಳ ಮಗುವಿನಲ್ಲಿ ಎಚ್ಎಂಪಿ ವೈರಸ್ ಪತ್ತೆಯಾಗಿದೆ.
ನವೆಂಬರ್ 12ರಂದು ಐದು ತಿಂಗಳ ಮಗು ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಮಗುವಿನಲ್ಲಿ ಎಚ್ ಎಂ ಪಿ ವೈರಸ್ ಪತ್ತೆಯಾಗಿದೆ.