March 22, 2026
Sunday, March 22, 2026
spot_img

ಶಾಕಿಂಗ್ ಘಟನೆ: ಸಿಸಿ ಕ್ಯಾಮರಾಗೆ ಸೆರೆಸಿಕ್ಕಿತು ಮಂಗಳೂರು ನಗರದಲ್ಲಿ ಚಿರತೆಯ ನಡುರಾತ್ರಿ ಬಿಂದಾಸ್ ನಡಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ನಗರದ ಕದ್ರಿ ಪರಿಸರದಲ್ಲಿ ಚಿರತೆಯೊಂದು ನಡುರಾತ್ರಿ ಅಡ್ಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೂಲಗಳ ಮಾಹಿತಿ ಪ್ರಕಾರ ದೃಶ್ಯಾವಳಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ಸಮೀಪದ ಡಾಕ್ಟರ್ಸ್ ಕಾಲೊನಿಯದ್ದಾಗಿದೆ. ಫೆ.23ರಂದು ಮುಂಜಾನೆ ಸುಮಾರು 1 ಗಂಟೆ ಸುಮಾರಿಗೆ ಚಿರತೆ ಸಂಚರಿಸುತ್ತಿರುವ ಈ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಕದ್ರಿ ದೇವಾಲಯದ ಮೇಲ್ಭಾಗದಲ್ಲಿ ಇರುವ ಸಣ್ಣ ಅರಣ್ಯ ಪ್ರದೇಶ ಹೊರತುಪಡಿಸಿದರೆ, ಈ ಪ್ರದೇಶ ಸಂಪೂರ್ಣ ಕಟ್ಟಡಗಳಿಂದ ಆವರಿಸಿಕೊಂಡಿದ್ದು, ಇಂತಹಾ ಕಾಂಕ್ರಿಟ್ ಕಾಡಿನಲ್ಲಿಯೂ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರನ್ನು ನಿವಾಸಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.


ಕಳೆದ ಒಂದು ವಾರ ಮೊದಲು ಶಕ್ತಿನಗರದಲ್ಲಿ ಸಣ್ಣ ಚಿರತೆ ಸಂಚರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅದಾದ ಬೆನ್ನಿಗೇ ದೊಡ್ಡ ಗಾತ್ರದ ಚಿರತೆ ನಗರದಲ್ಲಿಯೇ ಕಾಣಿಸಿಕೊಂಡಿರುವುದು ಕುತೂಹಲಕ್ಕೂ ಆತಂಕಕ್ಕೂ ಕಾರಣವಾಗಿದೆ. ಆದರೆ ಇದುವರೆಗೆ ಯಾರೂ ಚಿರತೆಯನ್ನು ನೇರವಾಗಿ ಕಂಡಿಲ್ಲ. ಅರಣ್ಯ ಇಲಾಖೆಗೆ ಸಹ ಯಾವುದೇ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !