October 10, 2026
Saturday, October 10, 2026
spot_img

‘ಧುರಂಧರ್ 2’ ಸಿನಿಮಾ ಪ್ರತಿಯೊಬ್ಬ ಭಾರತೀಯನ ಹೆಮ್ಮೆ: ಅನುಪಮ್ ಖೇರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಕುರಿತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಚಿತ್ರವನ್ನು ಭರ್ಜರಿಯಾಗಿ ಪ್ರಶಂಸಿಸಿದ್ದಾರೆ.

ಈ ಸಿನಿಮಾ ಕೇವಲ ಮನರಂಜನೆ ಅಲ್ಲ, ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಅನುಭವ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅನುಪಮ್ ಖೇರ್, ಸಿನಿಮಾ ನೋಡಿದ ತಕ್ಷಣವೇ ನಿರ್ದೇಶಕ ಆದಿತ್ಯ ಧರ್ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

“ಚಿತ್ರ ಮುಗಿದ ನಂತರ ಮನಸ್ಸಿನಲ್ಲಿ ಮೂಡುವ ಮೌನವೇ ಅದರ ಶಕ್ತಿಯನ್ನು ತೋರಿಸುತ್ತದೆ. ‘ಧುರಂಧರ್ 2’ ಅಂತಹ ಅನುಭವ ನೀಡುವ ಸಿನಿಮಾ” ಎಂದು ಅವರು ಹೇಳಿದ್ದಾರೆ.

ಚಿತ್ರದ ವಿರುದ್ಧ ಕೇಳಿಬರುತ್ತಿರುವ ಪ್ರೊಪಗಾಂಡ ಆರೋಪಗಳ ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಸಿನಿಮಾಗಳನ್ನು ಟೀಕಿಸುವವರು ತಮ್ಮದೇ ಕಥೆ ಬರೆಯಿಸಿ ಸಿನಿಮಾ ನಿರ್ಮಿಸಲಿ ಎಂದು ಸವಾಲು ಹಾಕಿದ್ದಾರೆ. ಆಧುನಿಕ ಭಾರತದ ವ್ಯವಸ್ಥೆ ಹಾಗೂ ಭದ್ರತಾ ಸಂಸ್ಥೆಗಳ ಸಾಮರ್ಥ್ಯವನ್ನು ಈ ಸಿನಿಮಾ ಚೆನ್ನಾಗಿ ತೋರಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Must Read