ಮಂಗಳೂರಲ್ಲಿ ಮನಮಿಡಿವ ಘಟನೆ: ವಿದ್ಯಾರ್ಥಿನಿಯ ಜೀವ ಉಳಿಸಲು ಆಸ್ಪತ್ರೆ ಆವರಣದ ಒಳಗೆ ಬಸ್ ನುಗ್ಗಿಸಿದ ಚಾಲಕ!

ಹೊಸದಿಗಂಗತ ಮಂಗಳೂರು:

ಹಠಾತ್ ಎದೆನೋವು ಕಾಣಿಸಿಕೊಂಡ ವಿದ್ಯಾರ್ಥಿಯನ್ನು ರಕ್ಷಿಸಲು ಬಸ್ ಚಾಲಕ, ನಿರ್ವಾಹಕ ಬಸ್ಸನ್ನು ನೇರ ಆಸ್ಪತ್ರೆ ಆವರಣಕ್ಕೆ ನುಗ್ಗಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಚಾಲಕನ‌ ಮಾನವೀಯತೆಗೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬಂದಿದೆ.

ಇಷ್ಟಕ್ಕೂ ಆಗಿದ್ದೇನು?

ಸ್ಟೇಟ್ ಬ್ಯಾಂಕ್ ಕೂಳೂರು ನಡುವೆ ಸಂಚರಿಸುವ 13 F ರೂಟ್ ನಂಬರ್ ನ ಕೃಷ್ಣ ಪ್ರಸಾದ್ ಹೆಸರಿನ ಬಸ್ ಕುಳೂರು ಮಾರ್ಗವಾಗಿ ಚಲಿಸುತ್ತಿರುವ ವೇಳೆ ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಹಠಾತ್ತನೆ ಎದೆ ನೋವು ಕಾಣಿಸಿಕೊಂಡಿದೆ. ಹೃದಯಾಘಾತ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಚಾಲಕ, ನಿರ್ವಾಹಕ ಹಿಂದೆಮುಂದೆ ಯೋಚಿಸದೆ ಬಸ್ ನಲ್ಲಿದ್ದ ಪ್ರಯಾಣಿಕರ ಸಹಿತ ಆಂಬುಲೆನ್ಸ್ ಮಾದರಿಯಲ್ಲಿ ಹಾನ್೯ ಮಾಡುತ್ತಾ 6 ಕಿ.ಮೀ ದೂರವನ್ನು ಕೇವಲ 6 ನಿಮಿಷಗಳಲ್ಲಿ ಕ್ರಮಿಸಿ ನೇರ ಆಸ್ಪತ್ರೆ ಆವರಣದೊಳಕ್ಕೇ ಬಸ್ ನುಗ್ಗಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ವಿದ್ಯಾರ್ಥಿನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗೆಗಿನ ವಿಡಿಯೋ ಈಗ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!