VIRAL VIDEO| ಸರ್ಕಾರಿ ನೌಕರನನ್ನು ರಸ್ತೆಯಲ್ಲಿ ಅಟ್ಟಾಡಿಸಿದ ವ್ಯಾಪಾರಿ: ಬಿಸಿ ಚಟ್ನಿಯಿಂದ ಹಲ್ಲೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ‌

ಉತ್ತರ ಪ್ರದೇಶದ ನೋಯ್ಡಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕರ್ತವ್ಯ ನಿರತ ಸರ್ಕಾರಿ ನೌಕರನ ಮೇಲೆ ಬೀದಿಬದಿ ವ್ಯಾಪಾರಿಯೊಬ್ಬ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೋಯ್ಡಾ ಪ್ರಾಧಿಕಾರದ ನೌಕರರು ರಸ್ತೆಯ ಅತಿಕ್ರಮಣಗಳನ್ನು ತೆಗೆಯುತ್ತಿದ್ದಾರೆ. ನಿಯಮ ಬಾಹಿರವಾಗಿ ರಸ್ತೆಗಿಳಿದು ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಗುತ್ತಿದೆ. ಈ ವೇಳೆ ಸಮೋಸಾ ಮಾರಾಟಗಾರರ ಗಾಡಿ ಪಲ್ಟಿಯಾಗಿದ್ದು, ಕೋಪಗೊಂಡ ನೌಕರ ನನ್ನ ಬಂಡಿಯನ್ನೇ ಬೀಳಿಸುತ್ತೀರಾ? ಎಂದು ಜಗಳಕ್ಕಿಳಿದಿದ್ದಾನೆ.

ಬಳಿಕ ಬಿಸಿ ಬಿಸಿ ಚಟ್ನಿಯ ಪಾತ್ರೆಯನ್ನು ತೆಗೆದುಕೊಂಡು ನೌಕರನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ನೌಕರನು ಭಯದಿಂದ ರಸ್ತೆಯಲ್ಲಿ ಓಡಿದರೂ ಬಿಡದೆ ಬಿಸಿ ಚಟ್ನಿ ಎರಚಿದನು. ಇಡೀ ಚಟ್ನಿ ನೌಕರನ ಬೆನ್ನಿಗೆ ಬಿದ್ದಿತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!