Thursday, November 13, 2025

ಆಘಾತಕಾರಿ ಮಾಹಿತಿ! 2 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆಚ್ಚುತ್ತಿರುವ ಖಾಯಿಲೆಗಳಿಂದ ಜನರ ಆರೋಗ್ಯದ ಸಮಸ್ಯೆಗಳು ವ್ಯಾಪಕ ಹಿನ್ನಲೆ ಬಿಪಿ, ಶುಗರ್, ಕ್ಯಾನ್ಸರ್ ಜೊತೆಗೆ ಕೋಮಾರ್ಬಿಟಿಸ್ ಹೊಂದಿರುವ ರೋಗಿಗಳ ಲಿಸ್ಟ್ ಮಾಡಲಾಗಿದ್ದು ಇವರಿಗೆಲ್ಲ ಮನೆ ಬಾಗಿಲಿನಲ್ಲಿಯೇ ಚಿಕಿತ್ಸೆ ಹಾಗೂ ಔಷಧ ನೀಡುವ ‘ಗೃಹ ಆರೋಗ್ಯ’ ಯೋಜನೆಯನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ.

ಹೃದಯ, ಕಿಡ್ನಿ, ಕ್ಯಾನ್ಸರ್, ಬಿಪಿ, ಮಧುಮೇಹ, ಇಸಿಜಿ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ನಡೆಸಿ ಆಯ್ದ ಸಮಸ್ಯೆಗಳಿಗೆ ಅಗತ್ಯವಿರುವಷ್ಟು ಔಷಧಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡಲಾಗುತ್ತಿದೆ.

ಕಳೆದ ಎರಡು ತಿಂಗಳಲ್ಲಿ ‘ಗೃಹ ಆರೋಗ್ಯದಡಿ’ ಲಕ್ಷಾಂತರ ಜನರಿಗೆ ಆರೋಗ್ಯ ಇಲಾಖೆ ಕ್ಯಾನ್ಸರ್ ಸ್ಕ್ರಿನಿಂಗ್ ಮಾಡಿದೆ. ಈ ವೇಳೆ 5664 ಕ್ಯಾನ್ಸರ್ ಪೀಡಿತ ರೋಗಿಗಳು ಪತ್ತೆಯಾಗಿದ್ದಾರೆ. ಕಳೆದ ಎರಡು ತಿಂಗಳ ‘ಗೃಹ ಆರೋಗ್ಯ’ದಲ್ಲಿ 5664 ಕ್ಯಾನ್ಸರ್ ಪೀಡಿತ ರೋಗಿಗಳು ಪತ್ತೆಯಾಗಿದ್ದು ಹೆಚ್ಚುವರಿ ಚಿಕಿತ್ಸೆಗೆ ಇಲಾಖೆ ಸೂಚಿಸಿದೆ. ಈ ಪೈಕಿ ಓರಲ್ ಕ್ಯಾನ್ಸರ್ 3403 ಜನರಲ್ಲಿ ಕಂಡು ಬಂದಿದೆ. ಆರೋಗ್ಯ ಇಲಾಖೆ ಇದೀಗ ಮತ್ತಷ್ಟು ಜನರನ್ನ ಸ್ಕ್ರೀನಿಂಗ್​ಗೆ ಒಳಪಡಿಸಲು ಮುಂದಾಗಿದೆ.

ಗೃಹ ಆರೋಗ್ಯ ಸ್ಕ್ರೀನಿಂಗ್ ವೇಳೆ ಬೆಳಕಿಗೆ ಬಂದ ಕ್ಯಾನ್ಸರ್ ಪ್ರಕರಣಗಳು
ಸ್ಕ್ರಿನಿಂಗ್ – 11,92,436
ಕ್ಯಾನ್ಸರ್ ಪತ್ತೆ – 3403

ಬ್ರೆಸ್ಟ್ ಕ್ಯಾನ್ಸರ್
ಸ್ಕ್ರಿನಿಂಗ್- 5,38,688
ಕ್ಯಾನ್ಸರ್ ಪತ್ತೆ- 1311

ಸರ್ವೈಕಲ್ ಕ್ಯಾನ್ಸರ್
ಕ್ಯಾನ್ಸರ್ ಪತ್ತೆ- 950
ಸ್ಕ್ರಿನಿಂಗ್- 3,85,714

error: Content is protected !!