SHOCKING NEWS | ಹೊಟೇಲ್ ನಲ್ಲಿ ಭೂಜ್​ಪುರಿ ನಟಿ ಆಕಾಂಕ್ಷಾ ದುಬೆ ಶವ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭೂಜ್​ಪುರಿ ನಟಿ ಆಕಾಂಕ್ಷಾ ದುಬೆಯ (Akanksha Dubey) ಮೃತದೇಹ ವಾರಣಾಸಿಯ (Varanasi) ಹೋಟೆಲ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ .
ಆಕಾಂಕ್ಷಾ ದುಬೆ, ನಾಯಕ್ ಹೆಸರಿನ ಭೋಜ್​ಪುರಿ ಸಿನಿಮಾದ ಚಿತ್ರೀಕರಣಕ್ಕಾಗಿ ವಾರಣಾಸಿಗೆ ತೆರಳಿದ್ದರು. ಈ ವೇಳೆ ಅವರು ಸಾರಾನಾಥ್ ಹೋಟೆಲ್​ನಲ್ಲಿ ತಂಗಿದ್ದು, ಇಂದು ಬೆಳಿಗ್ಗೆ ಹೋಟೆಲ್ ಸಿಬ್ಬಂದಿ ಕೋಣೆಯ ಒಳಗೆ ಹೋದಾಗ ನಟಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿದ್ದಿದ್ದು ಗಮನಿಸಿ, ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ನಟಿಯು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಭೊಜ್​ಪುರಿ ಚಿತ್ರರಂಗದಲ್ಲಿ ಸಪ್ನೋಂಕಿ ರಾಣಿ (ಕನಸಿನ ರಾಣಿ) ಎಂದೇ ಹೆಸರು ಗಳಿಸಿದ್ದ ನಟಿ ಆಕಾಂಕ್ಷಾ ದುಬೆ, ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ನಿನ್ನೆಯಷ್ಟೆ ಅವರ ನಟನೆಯ ಹಾಡೊಂದು ಬಿಡುಗಡೆ ಆಗಿತ್ತು. ಹಾಡನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಮಾತ್ರವೇ ಅಲ್ಲದೆ ತಾವೇ ಬೆಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಒಂದನ್ನು ಸಹ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕೇವಲ 19 ಗಂಟೆಗಳ ಹಿಂದೆ ತಮ್ಮ ವಿಡಿಯೋ ಹಂಚಿಕೊಂಡಿದ್ದ ಆಕಾಂಕ್ಷಾ ವಿಡಿಯೋನಲ್ಲಿ ಖುಷಿಯಾಗಿ ನೃತ್ಯ ಮಾಡಿದ್ದರು.

ಭೋಜ್​ಪುರಿ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದ ದುಬೆ ಪ್ರೇಮ ಪ್ರಕರಣವೂ ಸಖತ್ ಸದ್ದು ಮಾಡಿತ್ತು. ಸಹನಟ ಸಮರ್ ಸಿಂಗ್ ಅವರನ್ನು ಆಕಾಂಕ್ಷಾ ದುಬೆ ಪ್ರೀತಿಸುತ್ತಿದ್ದರು. ಪ್ರೇಮಿಗಳ ದಿನದಂದು ಸಮೀರ್ ಸಿಂಗ್ ಜೊತೆಗೆ ಕಳೆದ ಆತ್ಮೀಯ ಕ್ಷಣಗಳ ಫೋಟೊಗಳನ್ನು ಆಕಾಂಕ್ಷಾ ಹಂಚಿಕೊಂಡಿದ್ದರು.

ನಟಿಯ ಸಾವಿಗೆ ಅವರ ಪ್ರೇಮ ಪ್ರಕರಣವೇ ಕಾರಣವಾಗಿರಬಹುದೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಸಮರ್​ ಸಿಂಗ್​ ಅನ್ನು ಸಂಪರ್ಕಿಸಲು ಯತ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!