ಹೊಸದಿಗಂತ ಡಿಜಿಟಲ್ ಡೆಸ್ಕ್ :
ಟರ್ಕಿ ಮತ್ತು ಸಿರಿಯಾ ಈಗಾಗಲೇ ಭಾರೀ ಭೂಕಂಪ ದುರಂತದಿಂದ ತತ್ತರಿಸಿದ್ದುಮ್ ಇದೀಗ ಮತ್ತೆ ಟರ್ಕಿಯಲ್ಲಿ ಭೂಮಿ ನಡುಗಿದ್ದು, 7.6 ತೀವ್ರತೆಯ ಭೂಕಂಪ ಸಂಭವಿಸಿದೆ.
ಸಾವಿನ ಸಂಖ್ಯೆ ಈಗಾಗಲೇ 1300 ತಲುಪಿದ್ದು, ಇದರ ನಡುವೆ ಮತ್ತೆ ಕಂಪನ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಇಂದು ಮುಂಜಾನೆ 7.8 ತೀವ್ರತೆಯ ಭೂಕಂಪವು ಸಿರಿಯಾದಲ್ಲಿನ ಅಂತರ್ಯುದ್ಧ ಮತ್ತು ಇತರ ಸಂಘರ್ಷಗಳಿಂದ ಪಲಾಯನ ಮಾಡಿದ ಲಕ್ಷಾಂತರ ಜನರಿಂದ ತುಂಬಿರುವ ಪ್ರಕ್ಷುಬ್ಧ ಪ್ರದೇಶದ ಪ್ರಮುಖ ಟರ್ಕಿಯ ನಗರಗಳ ಸಂಪೂರ್ಣ ವಿಭಾಗಗಳನ್ನ ಅಳಿಸಿಹಾಕಿತು.