ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿ ಕಡಪಾಲ ಬಳಿ ಕಾರು ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮಹಿಳೆ ಸಾವನ್ನಪ್ಪಿದ್ದಾಳೆ.
ಕಾರು ಸುಳ್ಯ ಕಡೆಯಿಂದ ಕೊಡಗಿನತ್ತ ಹೋಗುತ್ತಿದ್ದು, ಟ್ಯಾಂಕರ್ ಕೊಡಗು ಕಡೆಯಿಂದ ಬರುತ್ತಿರುವ ಸಂದರ್ಭ ಅಪಘಾತ ಸಂಭವಿಸಿದೆ.
ಮೃತಪಟ್ಟವರನ್ನು ನೆಲ್ಲಿ ಹುದ್ದೇರಿ ನಾಪೋಕ್ಲುವಿನ ಶೋಭ ಎಂದು ಗುರುತಿಸಲಾಗಿದ್ದು, ಮೈನಾ ಮತ್ತು ದೇವಯ್ಯ ಗಂಭೀರ ಗಾಯಗಳಾಗಿದ್ದು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ .
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.